‘ಕಲ್ವರಿ’ ಜಲಾಂತರ್ಗಾಮಿಗೆ ನಾಳೆ ಪ್ರಧಾನಿ ಮೋದಿಯಿಂದ ಚಾಲನೆ
Update: 2017-12-13 19:21 IST
ಮುಂಬೈ,ಡಿ.13: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕಾ ವಿಭಾಗವು ರಜತ ಮಹೋತ್ಸವ ಸಂಭ್ರಮದಲ್ಲಿದ್ದು, ಅದರ ನೂತನ ಜಲಾಂತರ್ಗಾಮಿ ‘ಕಲ್ವರಿ’ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕಾರ್ಯಾರಂಭಗೊಳಿಸಲಿದ್ದಾರೆ.
ಮುಂಬೈನ ಮಜಗಾಂವ್ ಹಡಗು ನಿರ್ಮಾಣಕಟ್ಟೆಯಲ್ಲಿ ರೂಪುಗೊಂಡಿರುವ ಕಲ್ವರಿ ಸ್ಕಾರ್ಪಿನ್ ವರ್ಗದ ಮೊದಲ ಜಲಾಂತರ್ಗಾಮಿಯಾಗಿದೆ. ರಹಸ್ಯವಾಗಿ ಚಲಿಸುವ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ಇದು ನಿಖರ ನಿರ್ದೇಶಿತ ಶಸ್ತ್ರಾಸ್ತ್ರಗಳ ಮೂಲಕ ವೈರಿಯ ಮೇಲೆ ವಿನಾಶಕಾರಿ ದಾಳಿಯನ್ನು ನಡೆಸಬಲ್ಲುದು. ಭಾರತದ ಮೊದಲ ಜಲಾಂತರ್ಗಾಮಿಯಾಗಿದ್ದ ಮೊದಲ ಕಲ್ವರಿಯು 1967, ಡಿ.8ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದ್ದು, 30 ವರ್ಷಗಳ ಸೇವೆಯ ಬಳಿಕ 1996, ಮೇ 31ರಂದು ನಿವೃತ್ತಿಗೊಂಡಿತ್ತು.