ರೋಜರ್ ಫೆಡರರ್‌ಗೆ ಬಿಬಿಸಿ ಪ್ರಶಸ್ತಿ

Update: 2017-12-15 09:35 GMT

ಲಂಡನ್, ಡಿ.15: ಸ್ವಿಸ್‌ನ ಟೆನಿಸ್ ಸ್ಟಾರ್ ರೋಜರ್ ಫೆಡರರ್ ನಾಲ್ಕನೇ ಬಾರಿ ಬಿಬಿಸಿ ಕ್ರೀಡಾ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಆಯ್ಕೆಗೆ ನಡೆದ ಮತದಾನದಲ್ಲಿ 36ರ ಹರೆಯದ ಫೆಡರರ್ ಇತರ ಐವರು ಪ್ರತಿಸ್ಫರ್ಧಿಗಳನ್ನು ಹಿಂದಿಕ್ಕಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವಿವಾರ ಲಿವರ್‌ಪೂಲ್‌ನಲ್ಲಿ ನಡೆಯಲಿದೆ.

ಟೆನಿಸ್ ದಂತಕತೆ ಫೆಡರರ್ ಈವರ್ಷ ಆಸ್ಟ್ರೇಲಿಯನ್ ಹಾಗೂ ವಿಂಬಲ್ಡನ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯನ್ನು 19ಕ್ಕೆ ಏರಿಸಿಕೊಂಡಿದ್ದರು. ಏಕಪಕ್ಷೀಯವಾಗಿ ಸಾಗಿದ್ದ ಫೈನಲ್‌ನಲ್ಲಿ ಕ್ರೊಯೇಷಿಯದ ಮರಿನ್ ಸಿಲಿಕ್‌ರನ್ನು ಮಣಿಸಿದ್ದ ಫೆಡರರ್ 8ನೇ ಬಾರಿ ವಿಂಬಲ್ಡನ್ ಕಿರೀಟ ಧರಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಮೆಲ್ಬೋರ್ನ್‌ನಲ್ಲಿ ದೀರ್ಘಕಾಲದ ಪ್ರತಿಸ್ಪರ್ಧಿ ರಫ್ ನಡಾಲ್‌ರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು.

 ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಹಾಗೂ ಓಟದ ರಾಜ ಉಸೇನ್ ಬೋಲ್ಟ್ ತಲಾ ಮೂರು ಬಾರಿ ಬಿಬಿಸಿ ಪ್ರಶಸ್ತಿ ಜಯಿಸಿದ್ದಾರೆ.

‘‘ವರ್ಷದ ಬಿಬಿಸಿ ಕ್ರೀಡಾ ವ್ಯಕ್ತಿಯಾಗಿ ನನ್ನನ್ನು ಆಯ್ಕೆ ಮಾಡಿರುವ ಬ್ರಿಟನ್ ಜನತೆಗೆ ಧನ್ಯವಾದ ಸಲ್ಲಿಸುವೆ. ಇದು ಹೆಮ್ಮೆಯ ವಿಷಯ. ಬ್ರಿಟನ್ ಜನತೆ ನಾನು ಅವರ ದೇಶಕ್ಕೆ ಬಂದಾಗಲೆಲ್ಲಾ ಬೆಂಬಲ ನೀಡಿದ್ದಾರೆ’’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News