ಡಾನ್ 3 ಗೂ ಪ್ರಿಯಾಂಕಾ ನಾಯಕಿ

Update: 2017-12-15 12:32 GMT

‘ಫುಕ್ರೆ ರಿಟರ್ನ್ಸ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ತೇಲಾಡುತ್ತಿರುವ ನಿರ್ಮಾಪಕ ರಿತೇಶ್ ಸಿಂಧ್ವಾನಿ, ತಾನು ಆ್ಯಕ್ಷನ್ ಕಟ್ ಹೇಳಲಿರುವ ‘ಡಾನ್ 3’ ನಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಆದರೆ, ಡಾನ್ ಸರಣಿಯ ಮೊದಲ ಎರಡು ಚಿತ್ರಗಳಲ್ಲಿ ನಟಿಸಿದ್ದ ಶಾರುಕ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಡಾನ್3ನಲ್ಲೂ ನಾಯಕ- ನಾಯಕಿಯರಾಗಿ ಮುಂದುವರಿಯಲಿ ದ್ದಾರೆಂದು ರಿತೇಶ್ ದೃಢಪಡಿಸಿದ್ದಾರೆ.

‘ಡಾನ್ 3 ’ನಲ್ಲಿ ಪ್ರಿಯಾಂಕಾ ಬದಲಿಗೆ ದೀಪಿಕಾ ಅಭಿನಯಿಸ ಲಿದ್ದಾರೆಂದು ಕೆಲವು ತಿಂಗಳುಗಳಿಂದ ವದಂತಿಗಳು ಹರಿದಾಡುತ್ತಿದ್ದವು. ಇತ್ತ ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ, ಕೆಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ನಿರಾಕರಿಸಿರುವುದು ಕೂಡಾ ಈ ವದಂತಿಗಳಿಗೆ ಪುಷ್ಟಿ ನೀಡಿದ್ದವು. ‘ಡಾನ್ 3’ ಚಿತ್ರದ ಸ್ಕ್ರಿಪ್ಟ್ ಪೂರ್ಣಗೊಂಡಿದ್ದು, ತಾರಾಗಣದ ಆಯ್ಕೆ ಬಹುತೇಕ ಪೂರ್ಣಗೊಂಡಿದೆ. ಡಾನ್ ಸರಣಿಯ ಚಿತ್ರಗಳ ನಿರ್ದೇಶಕ ಫರ್ಹಾನ್ ಅಖ್ತರ್ ಅವರೇ ಈ ಚಿತ್ರಕ್ಕೂ ಆ್ಯಕ್ಷನ್‌ಕಟ್ ಹೇಳಲಿದ್ದಾರೆ.

ಸಿಂಧ್ವಾನಿ ನಿರ್ಮಾಣದ ‘ಫುಕ್ರೆ ರಿಟರ್ನ್ಸ್’ ಚಿತ್ರಮಂದಿರಗಳಿಗೆ ಕಾಲಿಟ್ಟ ಕೇವಲ ಮೂರೇ ದಿನಗಳಲ್ಲಿ ಅದರ ಗಳಿಕೆ 30 ಕೋಟಿ ರೂ. ದಾಟಿದೆ. ಈ ಮಧ್ಯೆ ದೀಪಿಕಾ ಪಡುಕೋಣೆ ಅಭಿನಯದ, ಮ್ಯಾಗ್ನಂ ಅಪಸ್ ‘ಪದ್ಮಾವತಿ’ ವಿವಾದದ ಬೆಂಕಿಯಲ್ಲಿ ಸಿಲುಕಿಕೊಂಡಿರುವ ಕಾರಣ, ಅದರ ಬಿಡುಗಡೆ ಅನಿರ್ದಿಷ್ಟಾವಧಿ ತನಕ ಮುಂದೂಡಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News