ಬೆಳ್ಳಿತೆರೆಗೆ ಅಂಬಿ ಪುತ್ರ ಅಭಿಷೇಕ್

Update: 2017-12-15 12:38 GMT

ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಚಿತ್ರರಂಗ ಪ್ರವೇಶಿಸಲಿರುವುದು ಇದೀಗ ನೂರಕ್ಕೆ ನೂರರಷ್ಟು ಖಚಿತವಾಗಿದೆ. ಈ ಮೊದಲೇ ಅಭಿಷೇಕ್ ಸಿನೆಮಾರಂಗ ಪ್ರವೇಶಿಸುವ ತನ್ನ ಹಂಬಲವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದೀಗ ಅಂಬರೀಷ್ ಅವರ ನಿಕಟವರ್ತಿ, ನಿರ್ಮಾಪಕ ಸಂದೇಶ್ ನಾಗರಾಜ್, ಅಭಿಷೇಕ್‌ರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ಹೊರಟಿದ್ದಾರೆ.

ಅಭಿಷೇಕ್‌ನ ಈ ಚೊಚ್ಚಲ ಚಿತ್ರವನ್ನು ಲೂಸಿಯಾ ಖ್ಯಾತಿಯ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ನಿರ್ದೇಶಿಸಲಿದ್ದಾರೆ. ಸದ್ಯ ಅಭಿಷೇಕ್ ವಿದೇಶದಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ತಂದೆಯಂತೆ ಮಗ ಕೂಡಾ ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯಲೆಂದು ಅಂಬರೀಷ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಬೆಸ್ಟ್ ಆಫ್ ಲಕ್ ಅಭಿಷೇಕ್...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News