ದಾಖಲೆ ಬರೆದ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ

Update: 2017-12-15 12:55 GMT

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದ ಆನಂತನಾಗ್ ಹಾಗೂ ಯುಟರ್ನ್ ಖ್ಯಾತಿಯ ರಾಧಿಕಾ ಚೇತನ್ ಅಭಿನಯದ ‘ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದುಬಿಟ್ಟಿದೆ.

ಹೌದು. ಜಗತ್ತಿನ ಅತೀ ಎತ್ತರದ ಕಟ್ಟಡವೆನಿಸಿರುವ ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣ ನಡೆಸಿದ ಪ್ರಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬುರ್ಜ್ ಖಲೀಫಾದಲ್ಲಿ, ಹಾಡೊಂದರ ಚಿತ್ರೀಕರಣವನ್ನು ಸತತ ನಾಲ್ಕು ದಿನಗಳ ಕಾಲ ಚಿತ್ರ ತಂಡ ನಡೆಸಿದೆ. ಛಾಯಾಗ್ರಹಕ ಪಿ.ಕೆ.ಎಚ್. ದಾಸ್ ಅತ್ಯಂತ ಅದ್ಭುತವಾಗಿ ಈ ಹಾಡಿನ ದೃಶ್ಯವನ್ನು ಸೆರೆಹಿಡಿದಿದ್ದಾರಂತೆ. ಚಿತ್ರದ ಶೂಟಿಂಗ್ ಪೂರ್ತಿಯಾಗಿದ್ದು, ಪೋಸ್ಟ್‌ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ನಿರ್ದೇಶಕ ನರೇಂದ್ರ ಬಾಬು ಸ್ವತಃ ಕಥೆ,ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದ ಆಡಿಯೋ ಬಿಡುಗಡೆಗೊಂಡಿದ್ದು, ಹಾಡುಗಳ ಬಗ್ಗೆ ಚಿತ್ರಪ್ರೇಮಿಗಳಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News