×
Ad

ಬೆಟ್ಟಿಂಗ್, ಜೂಜಾಟ ಕಾನೂನುಬದ್ಧಗೊಳಿಸಲು ಕಾನೂನು ಆಯೋಗ ನಿರ್ಧಾರ

Update: 2017-12-17 19:47 IST

ಹೊಸದಿಲ್ಲಿ, ಡಿ. 17: ಕ್ರೀಡೆ ಹಾಗೂ ಜೂಜಾಟದಲ್ಲಿ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸುವಂತೆ ಶಿಫಾರಸು ಮಾಡಲು ಕಾನೂನು ಆಯೋಗ ಸಿದ್ಧವಾಗಿದೆ. ಅದು ತನ್ನ ವರದಿಯನ್ನು ಶೀಘ್ರದಲ್ಲಿ ಸರಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ಜೂಜಾಟ ಹಾಗೂ ಬೆಟ್ಟಿಂಗ್‌ಗೆ ಕಠಿಣ ನಿಯಂತ್ರಣ ಕಪ್ಪು ಹಣ ಸೃಷ್ಟಿಯನ್ನು ನಿಗ್ರಹಿಸಲಿದೆ. ಇದು ಸರಕಾರದ ಆದಾಯ ಹೆಚ್ಚಿಸಲು ಹಾಗೂ ಉದ್ಯೋಗ ಸೃಷ್ಟಿಸಲು ನೆರವಾಗಲಿದೆ ಎಂದು ವರದಿ ಹೇಳಿದೆ.

   ಅನಿಯಂತ್ರಿತ ಜೂಜಾಟ ಹಾಗೂ ಬೆಟ್ಟಿಂಗ್‌ನಲ್ಲಿ ಪ್ರತಿವರ್ಷ 13,000 ಕೋ. ರೂ. ಉತ್ಪತ್ತಿಯಾಗುತ್ತದೆ. ಇದು ಕಪ್ಪು ಹಣದ ಪ್ರಮುಖ ಮೂಲ. ಭಯೋತ್ಪಾದನೆ ಹಾಗೂ ದೇಶ ವಿರೋಧಿ ಚಟುವಟಿಕೆಗಳಿಗೆ ಇದನ್ನೇ ನಿಧಿಯಾಗಿ ಬಳಸಲಾಗುತ್ತದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News