×
Ad

‘ದಿ ವೈರ್’ ಮನವಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

Update: 2017-12-17 20:27 IST

ಅಹ್ಮದಾಬಾದ್, ಡಿ. 17: ಬಿಜೆಪಿ ವರಿಷ್ಠ ಅಮಿತ್ ಶಾ ಪುತ್ರ ಜಯ್ ಶಾ ದಾಖಲಿಸಿದ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಜಾರಿಗೊಳಿಸಲಾದ ಆದೇಶ ಪ್ರಶ್ನಿಸಿ ಸುದ್ದಿ ಪೋರ್ಟಲ್ ‘ದಿ ವೈರ್’ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಅಹ್ಮದಾಬಾದ್ ನ್ಯಾಯಾಲಯ ಇಂದು ಅಂತ್ಯಗೊಳಿಸಿದೆ. ಆದರೆ, ಆದೇಶ ಕಾಯ್ದಿರಿಸಿದೆ. ಡಿಸೆಂಬರ್ 23ರಂದು ಆದೇಶ ಜಾರಿಗೊಳಿಸಲಾಗುವುದು ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಮೂರ್ತಿ ಬಿ.ಕೆ. ದಾಸೊಂಡಿ ಹೇಳಿದ್ದಾರೆ.

ಈ ಹಿಂದೆ, ಆದೇಶ ಪ್ರಶ್ನಿಸಿ ಸುದ್ದಿ ಪೋರ್ಟಲ್ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು ಹಾಗೂ ಆದೇಶ ಜಾರಿಗೊಳಿಸಿದ ನ್ಯಾಯಾಲಯ ಸಂಪರ್ಕಿಸುವಂತೆ ಸೂಚಿಸಿತ್ತು.

ಡಿಸೆಂಬರ್ 26ರಕ್ಕಿಂತ ಮುಂಚಿತವಾಗಿ ದಿ ವೈರ್‌ನ ಮನವಿ ವಿಚಾರಣೆ ಪೂರ್ಣಗೊಳಿಸುವಂತೆ ಉಚ್ಚ ನ್ಯಾಯಾಲಯ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News