×
Ad

40 ಸುಖೋಯಿ ವಿಮಾನದಲ್ಲಿ ಬ್ರಹ್ಮೋಸ್ ಕ್ಷಿಪಣಿ ಸಂಯೋಜನೆ ಕಾರ್ಯ ಆರಂಭ

Update: 2017-12-17 23:20 IST

 ಹೊಸದಿಲ್ಲಿ, ಡಿ. 17: ಭದ್ರತೆ ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ವಾಯು ಪಡೆಯ ಗಂಭೀರ ಅಗತ್ಯತೆ ಪೂರೈಸಲಿದೆ ಎಂದು ನಿರೀಕ್ಷಿಸಲಾದ 40 ಸುಖೋಯಿ ಯುದ್ಧ ವಿಮಾನಗಳಲ್ಲಿ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಸಂಯೋಜಿಸುವ ಕಾರ್ಯ ಆರಂಭವಾಗಿದೆ.

ಆಕಾಶದಿಂದ ಉಡಾವಣೆಗೊಳ್ಳುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಜಗತ್ತಿನ ಅತೀ ವೇಗದ ಕ್ಷಿಪಣಿ. ನವೆಂಬರ್ 22ರಂದು ಸುಖೋಯಿ-30 ಯುದ್ಧ ವಿಮಾನದಿಂದ ಇದನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಇದರೊಂದಿಗೆ ನಿಖರವಾಗಿ ದಾಳಿ ಮಾಡುವ ವಾಯು ಪಡೆಯ ಸಾಮರ್ಥ್ಯ ಹೆಚ್ಚಿಸಿತ್ತು. 40 ಸುಖೋಯಿ ಯುದ್ಧ ವಿಮಾನಗಳಿಗೆ ಬ್ರಹ್ಮೋಸ್ ಕ್ಷಿಪಣಿ ಸಂಯೋಜಿಸುವ ಕಾರ್ಯ ಆರಂಭವಾಗಿದೆ. ಯೋಜನೆಯ ಸಮಯ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆ 2020ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

 ಕ್ಷಿಪಣಿ ಸಂಯೋಜಿಸಲು ಅನುಕೂಲವಾಗುವಂತೆ 40 ಸುಖೋಯಿ ಯುದ್ಧ ವಿಮಾನಗಳ ವಿನ್ಯಾಸ ಬದಲಾಯಿಸುವ ಕಾರ್ಯ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್‌ನಲ್ಲಿ ನಡೆಯಲಿದೆ.

 2.5 ಟನ್ ಭಾರ ಹೊಂದಿರುವ ಈ ಕ್ಷಿಪಣಿ ಶಬ್ದಕ್ಕಿಂತ ಸುಮಾರು ಮೂರು ಪಟ್ಟು ವೇಗದಲ್ಲಿ, ಚಲಿಸುವ ಸಾಮರ್ಥ್ಯ ಹೊಂದಿದೆ ಹಾಗೂ 290 ಕಿ.ಮೀ. ವ್ಯಾಪ್ತಿ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News