ಬಾಕ್ಸರ್ ಕೌರ್ ಸಿಂಗ್‌ ಗೆ ಶಾರುಖ್ ಸಹಾಯಹಸ್ತ

Update: 2017-12-17 18:51 GMT

ಚಂಡೀಗಡ, ಡಿ.17: ವೈದ್ಯಕೀಯ ವೆಚ್ಚಗಳನ್ನು ಭರಿಸಲು ಪರದಾಡುತ್ತಿರುವ ಭಾರತದ ಬಾಕ್ಸಿಂಗ್ ದಂತಕತೆ ಪಂಜಾಬ್‌ನ ಕೌರ್ ಸಿಂಗ್‌ಗೆ(69) ಬಾಲಿವುಡ್ ನಟ ಶಾರುಖ್ ಖಾನ್ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ.

1982ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಸಿಂಗ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು 2 ಲಕ್ಷ ರೂ. ಸಾಲ ಮರುಪಾವತಿಗೆ ಪರದಾಡುತ್ತಿದ್ದಾರೆಂದು ವರದಿಯಾಗಿತ್ತು. ಈ ವರದಿಗೆ ಸ್ಪಂದಿಸಿರುವ ಶಾರುಖ್ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಮೂಲಕ 5 ಲಕ್ಷ ರೂ.ವನ್ನು ಹಸ್ತಾಂತರ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News