×
Ad

ದಂತವೈದ್ಯಕೀಯ ಕಾಯ್ದೆ ತಿದ್ದುಪಡಿಗೆ ಲೋಕಸಭೆಯಲ್ಲಿ ಮಸೂದೆ ಮಂಡನೆ

Update: 2017-12-18 20:18 IST

ಹೊಸದಿಲ್ಲಿ, ಡಿ. 18: ದಂತ ವೈದ್ಯಕೀಯ ಮಂಡಳಿಯ ಅಗತ್ಯದ ಅರ್ಹತೆ ಹೊಂದಿಲ್ಲದವರನ್ನು ನೇಮಿಸುವ ಪರಿಪಾಠ ಕೈಬಿಡಲು ಮಸೂದೆಯೊಂದನ್ನು ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿತು.ದಂತವೈದ್ಯ ಕಾಯ್ದೆ 1948ಕ್ಕೆ ತಿದ್ದುಪಡಿ ತರಲು ಆರೋಗ್ಯ ಸಚಿವ ಜೆ.ಪಿ. ನಡ್ಡಾ ದಂತವೈದ್ಯರ (ತಿದ್ದುಪಡಿ) ಮಸೂದೆ 2017ನ್ನು ಮಂಡಿಸಿದರು.

 ಈ ಕಾಯ್ದೆ ಅಡಿ ದಂತವೈದ್ಯರನ್ನು ಎರಡು ಭಾಗಗಳಲ್ಲಿ ನೋಂದಾಯಿಸಲಾಗುವುದು. ಎ ಹಾಗೂ ಬಿ. ವಿಭಾಗ ಎಯಲ್ಲಿ ಅಂಗೀಕೃತ ದಂತ ವೈದ್ಯಕೀಯ ಮಂಡಳಿಯ ಅರ್ಹತೆ ಹೊಂದಿರುವ ದಂತ ವೈದ್ಯರು ಒಳಗೊಳ್ಳಲಿದ್ದಾರೆ.

'ಬಿ' ವಿಭಾಗದಲ್ಲಿ 1948 ಮಾರ್ಚ್ 29ರ ಕಾಯ್ದೆ ಪ್ರಾರಂಭವಾದ ಕನಿಷ್ಠ 5 ವರ್ಷಗಳಿಂದ ಜೀವಾನಾಧಾರವಾಗಿ ದಂತವೈದ್ಯಕೀಯದಲ್ಲಿ ತೊಡಗಿರುವ ದಂತ ವೈದ್ಯಕೀಯ ಮಂಡಳಿಯ ಅರ್ಹತೆ ಇಲ್ಲದ ದಂತವೈದ್ಯರು ಒಳಗೊಳ್ಳಲಿದ್ದಾರೆ. ಈ ವಿಭಾಗದಲ್ಲಿ ಬಾಂಗ್ಲಾದೇಶದ ನಿರ್ವಸಿತರು (ಬಾಂಗ್ಲಾದೇಶ ರೂಪುಗೊಂಡ 1971ರಿಂದ) ಅಥವಾ 1957 ಎಪ್ರಿಲ್ 14ರ ಬಳಿಕ ಹಾಗೂ 1971 ಮಾರ್ಚ್ 25ರ ಮೊದಲು ಬರ್ಮಾ ಅಥವಾ ಸಿಲೋನ್‌ನಿಂದ ಹಿಂದಿರುಗಿದವರು ಒಳಗೊಳ್ಳಲಿದ್ದಾರೆ. ಸರಕಾರದ ಪ್ರಕಾರ 1972ರ ಬಳಿಕ ಬಿ ವಿಭಾಗದ ಅಡಿಯಲ್ಲಿ ಯಾವುದೇ ವ್ಯಕ್ತಿ ನೋಂದಣಿ ಮಾಡಿಲ್ಲ. ಈ ಮಸೂದೆ ಮೂಲಕ ಸರಕಾರ ದಂತ ವೈದ್ಯಕೀಯ ಮಂಡಳಿಯಲ್ಲಿ ಬಿ ವಿಭಾಗದಲ್ಲಿ ನೋಂದಣಿ ಮಾಡಲು ಅವಕಾಶವಿರುವವರನ್ನು ಬಿಟ್ಟು ಬಿಡಲು, ರಾಜ್ಯ ದಂತ ವೈದ್ಯಕೀಯ ಮಂಡಳಿ ಹಾಗೂ ಜಂಟಿ ರಾಜ್ಯ ದಂತ ವೈದ್ಯಕೀಯ ಮಂಡಳಿಯಿಂದ ದಂತವೈದ್ಯರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಮಸೂದೆ ಹೊಂದಿದೆ.

ಪ್ರಸ್ತುತ ಕೇಂದ್ರ ಸರಕಾರ ಭಾರತ ದಂತ ಮಂಡಳಿಯ ‘ಬಿ’ ವಿಭಾಗದಿಂದ ಕನಿಷ್ಠ ಇಬ್ಬರು ಸದಸ್ಯರನ್ನು ನಾಮನಿರ್ದೇಶಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News