×
Ad

ಭ್ರಷ್ಟಾಚಾರದಲ್ಲಿ ಕೇರಳ ತೃತೀಯ: ಎನ್‌ಸಿಆರ್‌ಬಿ ದತ್ತಾಂಶ

Update: 2017-12-20 20:07 IST
ಸಾಂದರ್ಭಿಕ ಚಿತ್ರ

ಕೋಲ್ಕತಾ, ಡಿ. 20: ಭ್ರಷ್ಟಾಚಾರದಲ್ಲಿ ಹಲವು ರಾಜ್ಯಗಳಲ್ಲಿ ಕೇರಳ ಮುಂಚೂಣಿಯ ಸ್ಥಾನದಲ್ಲಿದೆ. ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಅತ್ಯಧಿಕ ಭ್ರಷ್ಟಾಚಾರದ ಪ್ರಕರಣಗಳನ್ನು ಹೊಂದಿದ ದೇಶದ ರಾಜ್ಯಗಳಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ.

2016ರಲ್ಲಿ ಕೇರಳದಲ್ಲಿ 430ಕ್ಕೂ ಅಧಿಕ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ 2015ರಲ್ಲಿ 377 ಇತ್ತು. ಮಹಾರಾಷ್ಟ್ರದಲ್ಲಿ 1,016 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಥಮ ಸ್ಥಾನದಲ್ಲಿದೆ. ಇದರ ನಂತರ ಸ್ಥಾನವನ್ನು 569 ಪ್ರಕರಣಗಳು ದಾಖಲಾಗಿರುವ ಒಡಿಶಾ ಪಡೆದುಕೊಂಡಿದೆ. 2016ರಲ್ಲಿ ಭಾರತದಲ್ಲಿ ಒಟ್ಟು 4,439 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಶೇ. 9.7 ಪ್ರಕರಣಗಳು ದಾಖಲಾಗಿರುವುದು ಕೇರಳದಲ್ಲಿ. ಮಹಾರಾಷ್ಟ್ರ (22.9) ಹಾಗೂ ಒಡಿಶಾ (12.8)ದ ಬಳಿಕದ ಸ್ಥಾನವನ್ನು ಕೇರಳ ಪಡೆದುಕೊಂಡಿದೆ.

ಆಸಕ್ತಿದಾಯಕ ವಿಚಾರವೆಂದರೆ ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ ಕೇರಳದಲ್ಲಿ 2016ರಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಇಲಾಖೆ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಒಬ್ಬ ಮಾತ್ರ. ಇದೇ ರೀತಿ ಕೇರಳದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅತೀ ಹೆಚ್ಚು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 2016ರ ಅಂತ್ಯದಲ್ಲಿ 1,167 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದ್ದುವು. ಕಳೆದ ವರ್ಷದ 1,102 ಪ್ರಕರಣಗಳು ಹಾಗೂ ಅದೇ ವರ್ಷ ವಿಚಾರಣೆಗೆ ಕಳುಹಿಸಲಾದ 65 ಪ್ರಕರಣಗಳು ಬಾಕಿ ಉಳಿದಿದ್ದವು. ಆದಾಗ್ಯೂ, 49 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News