×
Ad

ಫ್ಲೋರೈಡ್ ಕಲುಷಿತ ನೀರು ಬಳಸುತ್ತಿರುವ ದೇಶದ 10 ಕೋಟಿ ಜನರು !

Update: 2017-12-21 19:27 IST

ಪಣಜಿ, ಡಿ. 21: ದೇಶದಲ್ಲಿ 10 ಕೋಟಿಗೂ ಅಧಿಕ ಜನರು ಅತ್ಯಧಿಕ ಫ್ಲೋರೈಡ್ ಕಲುಷಿತ ನೀರು ಪಡೆಯುತ್ತಿದ್ದಾರೆ ಎಂದು ಗುರುವಾರ ಲೋಕಸಭೆಯಲ್ಲಿ ಮಾಹಿತಿ ನೀಡಲಾಯಿತು.

 ಈ ಸಮಸ್ಯೆ ನಿವಾರಿಸಲು ಕೇಂದ್ರ ಸರಕಾರ 800 ಕೋ. ರೂ. ಬಿಡುಗಡೆ ಮಾಡಿದೆ. ಇದರಿಂದ ಸಮುದಾಯ ನೀರು ಸಂಸ್ಕರಣಾ ಘಟಕಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ಸಚಿವ ನರೇಂದ್ರ ಸಿಂಗ್ ಟೋಮರ್ ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.

ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ 12,577 ಮನೆಗಳಲ್ಲಿ 10.06 ಕೋಟಿ ಜನರು ವಾಸಿಸುತ್ತಿದ್ದಾರೆ. ಇವರು ಅಧಿಕ ಫ್ಲೋರೈಡ್ ಅಂಶ ಹೊಂದಿದ ನೀರು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

 ಅರ್ಸೇನಿಕ್ ಹಾಗೂ ಫ್ಲೋರೈಡ್‌ನಿಂದ ನೀರು ಕಲುಷಿತಗೊಳ್ಳುವುದನ್ನು ನಿರ್ವಹಿಸಲು ನೀತಿ ಆಯೋಗದ ಶಿಫಾರಸಿನಿಂದ ಕೇಂದ್ರ ಸರಕಾರ 2016 ಮಾರ್ಚ್‌ನಲ್ಲಿ 800 ಕೋ. ರೂ. ಬಿಡುಗಡೆ ಮಾಡಿದೆ. ಕುಡಿಯಲು ಹಾಗೂ ಅಡುಗೆಗೆ ಶುದ್ಧ ನೀರು ಒದಗಿಸಲು 1,327 ಅರ್ಸೇನಿಕ್ ಸಂಸ್ಕರಣೆ ಘಟಕ ಹಾಗೂ 12,014 ಫ್ಲೋರೈಡ್ ಸಂಸ್ಕರಣೆ ಘಟಕ ಆರಂಭಿಸಲಾಗುವುದು ಎಂದು ಟೋಮರ್ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಅರ್ಸೇನಿಕ್ ಹಾಗೂ ಫ್ಲೋರೈಡ್‌ನಿಂದ ತೊಂದರೆಗೊಳಗಾಗಿರುವ 28 ಸಾವಿರ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಮಾರ್ಚ್ 22ರಂದು ರಾಷ್ಟ್ರೀಯ ನೀರು ನೀತಿ ಉಪಯೋಜನೆಯನ್ನು ಸಚಿವಾಲಯ ಆರಂಭಿಸಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News