2ಜಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿರುವ ಇಡಿ

Update: 2017-12-21 14:22 GMT

ಹೊಸದಿಲ್ಲಿ,ಡಿ.21: ಜಾರಿ ನಿರ್ದೇಶನಾಲಯ(ಇಡಿ)ವು 2ಜಿ ಸ್ಪ್ರೆಕ್ಟ್ರಂ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿರುವ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲಿದೆ ಎಂದು ಇಡಿ ಮೂಲಗಳು ತಿಳಿಸಿದವು.

ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ರಾಜಾ, ಕನಿಮೋಳಿ, ವಿನೋದ್ ಗೊಯೆಂಕಾ, ಆಸಿಫ್ ಬಲ್ವಾ, ರಾಜೀವ ಅಗರವಾಲ್, ಕರೀಂ ಮೊರಾನಿ ಪಿ.ಅಮೃತಂ, ಮತ್ತು ಶರದ್ ಕುಮಾರ್ ಅವರನ್ನು ಖುಲಾಸೆಗೊಳಿಸಿ ಗುರುವಾರ ತೀರ್ಪು ನೀಡಿದೆ.

  ಸ್ವಾನ್ ಟೆಲಿಕಾಮ್ ಪ್ರೈ.ಲಿ.ನ ಪ್ರವರ್ತಕರು ಡಿಎಂಕೆಯ ಕಲೈನಾರ್ ಟಿವಿಯ ಪ್ರವರ್ತಕರಿಗೆ 200 ಕೋ.ರೂ.ಗಳನ್ನು ನೀಡಿದ್ದರು ಎಂದು ಆರೋಪಿಸಿ ಇಡಿ ದಾಖಲಿಸಿದ್ದ ಪ್ರಕರಣದ ದೋಷಾರೋಪಣ ಪಟ್ಟಿಯಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಪತ್ನಿ ದಯಾಳು ಅಮ್ಮಾಳ್ ಅವರನ್ನೂ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

ತನ್ನ ಅಂತಿಮ ವರದಿಯಲ್ಲಿ ಅದು 10 ವ್ಯಕ್ತಿಗಳನ್ನು ಮತ್ತು ಒಂಭತ್ತು ಕಂಪನಿಗಳನ್ನು ಅಕ್ರಮ ಹಣ ವಹಿವಾಟು ಕಾಯ್ದೆಯಡಿ ವಿವಿಧ ಅಪರಾಧಗಳಿಗಾಗಿ ಆರೋಪಿಗಳನ್ನಾಗಿ ದೋಷಾರೋಪಣ ಪಟ್ಟಿಯಲ್ಲಿ ಹೆಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News