ಒಬಿಸಿ ಉಪವರ್ಗೀಕರಣ ಪರಿಶೀಲನಾ ಸಮಿತಿ ಕಾಲಾವಧಿ ವಿಸ್ತರಣೆ

Update: 2017-12-21 14:38 GMT

ಪಣಜಿ, ಡಿ. 21: ವರದಿ ಸಲ್ಲಿಸಲು ಮುಂದಿನ ವರ್ಷ ಎಪ್ರಿಲ್ ವರೆಗೆ ಹೆಚ್ಚುವರಿ ಸಮಯ ನೀಡುವುದರೊಂದಿಗೆ ಒಬಿಸಿಯಲ್ಲಿ ಉಪ-ವರ್ಗೀಕರಣ ವಿಷಯ ಪರಿಶೀಲಿಸಲು ರೂಪಿಸಲಾದ ಸಮಿತಿಯ ಅವಧಿ ವಿಸ್ತರಣೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಮೀಸಲಾತಿ ಸೌಲಭ್ಯದ ಹೆಚ್ಚು ‘ನ್ಯಾಯಸಮ್ಮತ ವಿತರಣೆ’ಗೆ ಉಪ ವರ್ಗೀಕರಣ ಪರಿಶೀಲಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಜಿ ನ್ಯಾಯಮೂರ್ತಿ ಜಿ. ರೋಹಿಣಿ ಅವರ ನೇತೃತ್ವದಲ್ಲಿ ಸಮಿತಿ ನಿಯೋಜಿಸಿದ್ದರು. ಈ ಸಮಿತಿ 12 ವಾರಗಳಲ್ಲಿ ವರದಿ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ವರದಿ ಸಲ್ಲಿಕೆಗೆ ಇನ್ನು 12 ವಾರಗಳನ್ನು ನೀಡುವ ಮೂಲಕ ಸಂಪುಟ ಗಡುವನ್ನು ವಿಸ್ತರಿಸಿದೆ. ಇದರಿಂದ ಸಮಿತಿ 2018 ಎಪ್ರಿಲ್ 2ರಂದು ವರದಿ ಸಲ್ಲಿಸಲಿದೆ. ಒಬಿಸಿಗಳಿಗೆ ಮೀಸಲಾತಿ ಸೌಲಭ್ಯ ನೀಡುವ ರಾಜ್ಯಗಳನ್ನು ಭೇಟಿಯಾಗಿರುವ ಸಮಿತಿ ಅದು ಸಂಗ್ರಹಿಸಿದ ಅಗಾಧ ಮಾಹಿತಿಯ ವಿಶ್ಲೇಷಣೆಗೆ ಇನ್ನಷ್ಟು ಸಮಯವಕಾಶ ಕೋರಿತ್ತು.

ಜಾತಿ ಹಾಗೂ ಸಮುದಾಯದಗಳ ನಡುವೆ ಮೀಸಲಾತಿ ಸೌಲಭ್ಯದ ನ್ಯಾಯೋಚಿತವಲ್ಲದ ವಿತರಣೆ ಪರಿಶೀಲನೆ ಜವಾಬ್ದಾರಿ ಹಾಗೂ ಒಬಿಸಿಯಂತಹ ಜಾತಿಗಳಲ್ಲಿ ಉಪ ವರ್ಗೀಕರಣ ವೈಜ್ಞಾನಿಕ ಮಾನದಂಡ, ಪರಿಮಾಣ, ನಿಯಮಗಳನ್ನು ಅಸ್ತಿತ್ವಕ್ಕೆ ತರುವ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News