8ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಪುಣೆ, ಡಿ.22 : 8ರ ಹರೆಯದ ಬಾಲಕಿಯ ಮೇಲೆ ನೆರೆಹೊರೆಯ ಆರು ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.
ಆರೋಪಿಗಳಲ್ಲಿ ಓರ್ವ 19ರ ಹರೆಯದ ಹುಡುಗನಾಗಿದ್ದರೆ ಉಳಿದವರು ಸುಮಾರು 10 ವರ್ಷದ ಅಪ್ರಾಪ್ತ ಬಾಲಕರು . 19ರ ಹರೆಯದ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ತಾಯಿ ಚಿಕಿತ್ಸೆಗೆಂದು ಕರೆದೊಯ್ದೆಗ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷೆಯ ಸಂದರ್ಭ ಬಾಲಕಿಯ ದೇಹದ ಮೇಲೆ ಕೆಲವು ಕಲೆಗಳನ್ನು ಗಮನಿಸಿದ ವೈದ್ಯರಿಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಸಂದೇಹ ಉಂಟಾಗಿದೆ. ಈ ಬಗ್ಗೆ ವಿಚಾರಿಸಿದಾಗ ಕಳೆದ ಕೆಲ ವಾರದಿಂದ ಆರು ಮಂದಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಬಾಲಕಿ ತಿಳಿಸಿದ್ದಾಳೆ. ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದೆ. ಆರು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.