×
Ad

ಸಾಹಿತ್ಯ ಅಕಾಡಮಿ ಪ್ರಶಸ್ತಿ ತಿರಸ್ಕರಿಸಿದ ಕವಿ, ಸಾಹಿತಿ ಇಂಕಿಲಾಬ್ ಕುಟುಂಬ

Update: 2017-12-22 20:08 IST

ಚೆನ್ನೈ, ಡಿ.22: ಹೆಸರಾಂತ ತಮಿಳು ಕವಿ ಮತ್ತು ಸಾಹಿತಿ ಇಂಕಿಲಾಬ್ ಅವರು ಮರಣೋತ್ತರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದರೂ ಅವರ ಕುಟುಂಬ ವರ್ಗ ಮಾತ್ರ ಈ ಪ್ರಶಸ್ತಿಯನ್ನು ಪಡೆಯಲು ನಿರಾಕರಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಇಂಕಿಲಾಬ್ ಅವರ ಪುತ್ರಿ ಆಮೀನಾ, ನನ್ನ ತಂದೆ ಸರಕಾರಗಳ ವಿರುದ್ಧ ಧ್ವನಿಯೆತ್ತುತ್ತಿದ್ದರು. ಅವರು ಎಂದೂ ತಮ್ಮ ಬರವಣಿಗೆಗಾಗಿ ಪ್ರಶಸ್ತಿಯನ್ನು ನಿರೀಕ್ಷಿಸುತ್ತಿರಲಿಲ್ಲ. ಅವರಿಗೆ ಬದುಕಿರುವಾಗ ಸಿಕ್ಕಿದ್ದು ಬರೀ ಟೀಕೆಗಳು ಮತ್ತು ಖಂಡನೆಗಳು. ವಿಚಾರಣೆಗಾಗಿ ಪೊಲೀಸರಿಂದ ಪದೇಪದೆ ಬರುತ್ತಿದ್ದ ಕರೆಗಳನ್ನೇ ಅವರು ಪ್ರಶಸ್ತಿ ಎಂದು ಭಾವಿಸಿದ್ದರು ಎಂದು ತಿಳಿಸಿದ್ದಾರೆ. ಆಮೀನಾ ಸದ್ಯ ಇಂಕಿಲಾಬ್ ಪ್ರತಿಷ್ಠಾನದ ಆಡಳಿತ ನಿರ್ವಾಹಕರಾಗಿದ್ದಾರೆ.

ಇಂಕಿಲಾಬ್ ಅವರ ಜೊತೆ ಕೆಲಸ ಮಾಡಿರುವ ಮತ್ತು ಅವರ ನಾಟಕಗಳನ್ನು ನಿರ್ದೇಶಿಸಿರುವ ರಂಗಕರ್ಮಿ ಮಂಗೈ ಪ್ರಕಾರ ಇಂಕಿಲಾಬ್‌ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅವರು ಬದುಕಿರುವಾಗಲೇ ನೀಡಬೇಕಿತ್ತು. ಅವರು ಅದನ್ನು ಸ್ವೀಕರಿಸುತ್ತಿದ್ದರು ಅಥವಾ ತಿರಸ್ಕರಿಸುತ್ತಿದ್ದರು. ಆದರೆ ಪ್ರಶಸ್ತಿಗೆ ಪರಿಗಣಿಸಲ್ಪಟ್ಟ ಸಾಹಿತಿಗಳ ಪಟ್ಟಿಯಲ್ಲಿ ಅವರ ಹೆಸರು ಹಲವು ಬಾರಿ ಕಾಣಿಸಿಕೊಂಡಿತ್ತು. ಆದರೆ ಇಂಕಿಲಾಬ್ ತಮ್ಮ ಬರವಣಿಗೆಯಲ್ಲಿ ಜನರ ಪರವಾಗಿ ಅವರ ಧ್ವನಿಯಾಗಿ ನಿಲ್ಲುತ್ತಿದ್ದರು ಎಂಬುದೇ ಅವರಿಗೆ ಪ್ರಶಸ್ತಿ ನೀಡದಿರಲು ಕಾರಣವಾಗಿದೆ.

ಇನ್ನೊರ್ವ ತಮಿಳು ಸಾಹಿತಿ ಯು.ಮ ವಾಸುಕಿ ಕೂಡಾ ಈ ಬಾರಿಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News