×
Ad

ಲಂಕೆಗೆ ಕಠಿಣ ಸವಾಲು ವಿಧಿಸಿದ ಟೀಮ್ ಇಂಡಿಯಾ

Update: 2017-12-22 21:25 IST

ಇಂದೋರ್, ಡಿ.22: ಶ್ರೀಲಂಕಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಶುಕ್ರವಾರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವೇಗದ ಶತಕ (118)ಮತ್ತು ಲೋಕೇಶ್ ರಾಹುಲ್ ಅವರ ಅರ್ಧಶತಕ (89) ನೆರವಿನಲ್ಲಿ ಭಾರತ ಟ್ವೆಂಟಿ -20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದೆ.

ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲಿಸಿದ ಶತಕದ ನೆರವಿನಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 260 ರನ್ ಗಳಿಸುವ ಮೂಲಕ , ಶ್ರೀಲಂಕಾ ತಂಡಕ್ಕೆ ಕಠಿಣ ಸವಲು ವಿಧಿಸಿದೆ.

ಭಾರತ ಇದರೊಂದಿಗೆ ಟ್ವೆಂಟಿ -20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ. ಶ್ರೀಲಂಕಾ ತಂಡ 2007ರಲ್ಲಿ ಕೀನ್ಯಾ ವಿರುದ್ಧ ದಾಖಲಿಸಿದ್ದ ಸ್ಕೋರ್‌ನ್ನು ಸರಿಗಟ್ಟಿದೆ. ಶ್ರೀಲಂಕಾ 6 ವಿಕೆಟ್ ನಷ್ಟದಲ್ಲಿ 260 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News