ಗಾನಲೋಕದ ದಿಗ್ಗಜ ಮುಹಮ್ಮದ್ ರಫಿಯವರಿಗೆ ಗೂಗಲ್ ನಿಂದ 'ಡೂಡಲ್' ಗೌರವ

Update: 2017-12-24 14:16 GMT

ಹೊಸದಿಲ್ಲಿ, ಡಿ.24: ಗಾನಲೋಕದ ದಿಗ್ಗಜ, ಗಾಯಕ ಮುಹಮ್ಮದ್ ರಫಿಯವರ 93ನೆ ಹುಟ್ಟುಹಬ್ಬದ ಸಂದರ್ಭ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.

ಮುಂಬೈ ಮೂಲಕ ಇಲ್ಲಸ್ಟ್ರೇಟರ್ ಸಾಜಿದ್ ಶೈಖ್ ರಚಿಸಿರುವ ಈ ಡೂಡಲ್, “ಸ್ಟುಡಿಯೋದಿಂದ ಆರಂಭಗೊಂಡ ಮುಹಮ್ಮದ್ ರಫಿಯವರ ಹಾಡುಗಳು, ಬೆಳ್ಳಿತೆರೆಗೆ ತಲುಪಿ ಅಲ್ಲಿಂದ ಅಭಿಮಾನಿಗಳ ಹೃದಯದಲ್ಲಿ ನೆಲೆನಿಂತ ಪಯಣವನ್ನು ಬಿಂಬಿಸುತ್ತದೆ”

“ತನ್ನ ಹಾಡುಗಳ ಪದಗಳ ಮೂಲಕ ತನ್ನದೇ ಆದ ಪರಂಪರೆಯೊಂದನ್ನು ಬರೆದ ವ್ಯಕ್ತಿ” ಎಂದು ಗೂಗಲ್ ಇಂಡಿಯಾದ ಟ್ವಿಟರ್ ಹ್ಯಾಂಡಲ್ 5 ಸಾವಿರದಷ್ಟು ಹಾಡುಗಳನ್ನು ಹಾಡಿದ ರಫಿಯವರನ್ನು ಹೊಗಳಿದೆ.

1967ರಲ್ಲಿ ಭಾರತ ಸರಕಾರವು ರಫಿಯವರಿಗೆ ಪದ್ಮ ಶ್ರೀ ನೀಡುವ ಮೂಲಕ ಗೌರವಿಸಿದೆ. 1977ರಲ್ಲಿ ‘ಕಮ್ ಕಿಸೀಸೆ ಕಮ್ ನಹೀನ್’ ಚಿತ್ರದ ‘ಕ್ಯಾ ಹುವಾ ತೇರಾ ವಾದಾ’ ಹಾಡಿಗಾಗಿ ಮುಹಮ್ಮದ್ ರಫಿಯವರು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News