ಕಾಮನ್‌ವೆಲ್ತ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಸಿದ್ಧ: ವಿಜೇಂದರ್

Update: 2017-12-24 18:39 GMT

ಜೈಪುರ, ಡಿ.24: ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 10ನೇ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಕಾಮನ್‌ವೆಲ್ತ್ ಹಾಗೂ ವರ್ಲ್ಡ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲಲು ಕಠಿಣ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದ್ದಾರೆ.

32ರ ಹರೆಯದ ವಿಜೇಂದರ್ ಶನಿವಾರ ರಾತ್ರಿ ನಡೆದ ಡಬ್ಲುಬಿಒ ಒರಿಯೆಂಟಲ್ ಹಾಗೂ ಏಷ್ಯಾ ಪೆಸಿಫಿಕ್ ಸೂಪರ್ ಮಿಡ್ಲ್‌ವೇಟ್ ಚಾಂಪಿಯನ್‌ಶಿಪ್‌ನಲ್ಲಿ ಘಾನಾದ ಮಿಡ್ಲ್‌ವೇಟ್ ಚಾಂಪಿಯನ್ ಎರ್ನೆಸ್ಟ್ ಅಮುಝು ಅವರನ್ನು ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದರು.

 ‘‘ಈ ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದ್ದಕ್ಕೆ ಸಂತೋಷವಾಗುತ್ತಿದೆ. ಮುಂದಿನ ವರ್ಷ ಕಾಮನ್‌ವೆಲ್ತ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಎದುರು ನೋಡುತ್ತಿರುವೆ. ಈ ಪಂದ್ಯವನ್ನು ಯಶಸ್ಸುಗೊಳಿಸಿದ ಜೈಪುರ ಜನತೆ ಹಾಗೂ ಬೆಂಬಲ ನೀಡಿದ ಭಾರತದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುವೆ’’ ಎಂದು ವಿಜೇಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News