‘ಓಖಿ’ ಚಂಡಮಾರುತದಿಂದ ಮೃತಪಟ್ಟವರಿಗಾಗಿ ಸಮುದ್ರದಾಳದಲ್ಲಿ ವಿಶೇಷ ಪ್ರಾರ್ಥನೆ

Update: 2017-12-25 14:23 GMT

ತಿರುವನಂತಪುರಂ, ಡಿ,25: ಕ್ರಿಸ್ಮಸ್ ದಿನವಾದ ರವಿವಾರ ಇಲ್ಲಿನ ಕೋವಲಂನ ಸಮುದ್ರದಲ್ಲಿ ಮುಳುಗಿದ ಡೈವರ್ಸ್ ಹಾಗು ಮೀನುಗಾಗರರು ಓಖಿ ಚಂಡಮಾರುತದಿಂದ ಮೃತಪಟ್ಟವರಿಗಾಗಿ ಸಮುದ್ರದ ಆಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕೆಲವರ ಸಂಬಂಧಿಕರು ‘ಓಖಿ’ ಚಂಡಮಾರುತದಿಂದ ಮೃತಪಟ್ಟಿದ್ದರು. “ಮೀನುಗಾರರು ಸಮುದ್ರದಲ್ಲಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ನಾವು ಸಮುದ್ರದಾಳದಲ್ಲಿ ಪ್ರಾರ್ಥನೆ ನಡೆಸಲು ತೀರ್ಮಾನಿಸಿದ್ದೆವು” ಎಂದು ಬಾಂಡ್ ಓಶಿಯನ್ ಸಫಾರಿ ಎಂಬ ಪ್ರವಾಸೋದ್ಯಮ ಸಂಸ್ಥೆಯೊಂದರ ಜಾಕ್ಸನ್ ಪೀಟರ್ ಎಂಬವರು ತಿಳಿಸಿದ್ದಾರೆ.

ಎಂಟು ಮೀನುಗಾರರ ಹಾಗು ನಾಲ್ಕು ಡೈವರ್ ಗಳ ತಂಡ ಸಮುದ್ರದಂಡೆಯಿಂದ 200 ಮೀಟರ್ ದೂರದಲ್ಲಿ ಸಮುದ್ರದಾಳಕ್ಕೆ ಧುಮುಕಿದರು. ಲ್ಯಾಮಿನೇಟೆಡ್ ಶೀಟ್ ನಲ್ಲಿ ಬರೆದಿದ್ದ ವೈಯಕ್ತಿಯ ನಂಬಿಕೆಯ ಪ್ರಾರ್ಥನೆಗಳನ್ನು ಅವರು ಸಮುದ್ರದಾಳದಲ್ಲಿ ಅವರು ಓದಿದರು. ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ನಡೆಯಿತು. ಓಖಿ ಚಂಡಮಾರುತದಿಂದ ಮೃತಪಟ್ಟವರು ಹಾಗು ಇನ್ನೂ ನಾಪತ್ತೆಯಾಗಿರುವವರಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News