×
Ad

ರಸ್ತೆ ಅಪಘಾತ: ಕ್ರಿಸ್ಮಸ್ ಪ್ರಾರ್ಥನೆಗಾಗಿ ಹೋಗುತ್ತಿದ್ದ 20 ಮಂದಿ ಮೃತ್ಯು

Update: 2017-12-25 21:55 IST

ಮನಿಲಾ, ಡಿ. 25: ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ಕ್ರಿಸ್ಮಸ್ ದಿನದ ಪ್ರಾರ್ಥನೆಗಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ 20 ಮಂದಿ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಗೂ ಪಟ್ಟಣದಲ್ಲಿ ಕುಟುಂಬ ಸದಸ್ಯರನ್ನು ಮುಂಜಾನೆಯ ಪ್ರಾರ್ಥನೆಗಾಗಿ ಕರೆದೊಯ್ಯುತ್ತಿದ್ದ ಸಣ್ಣ ಬಸ್ಸೊಂದು ಎದುರಿನಿಂದ ಬರುತ್ತಿದ್ದ ದೊಡ್ಡ ಬಸ್ಸೊಂದಕ್ಕೆ ಢಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿದೆ.

ಸಣ್ಣ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 15 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News