ತನ್ನ ರಾಜಕೀಯ ಪಕ್ಷದ ಪ್ರಥಮ ಕಚೇರಿ ಉದ್ಘಾಟಿಸಿದ ಮುಂಬೈ ದಾಳಿಯ ಸೂತ್ರಧಾರ ಸಯೀದ್
Update: 2017-12-25 22:00 IST
ಲಾಹೋರ್, ಡಿ. 25: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್ ರವಿವಾರ ತನ್ನ ರಾಜಕೀಯ ಪಕ್ಷ ಮಿಲಿ ಮುಸ್ಲಿಮ್ ಲೀಗ್ (ಎಂಎಂಎಲ್)ನ ಪ್ರಥಮ ಕಚೇರಿಯನ್ನು ಸೋಮವಾರ ಲಾಹೋರ್‌ನಲ್ಲಿ ತೆರೆದಿದ್ದಾನೆ.
ತನ್ನ ಸಂಘಟನೆ ಜಮಾಅತುದಅವಾ 2018ರ ಸಂಸದೀಯ ಚುನಾವಣೆಯಲ್ಲಿ ಎಂಎಂಎಲ್ ಹೆಸರಿನಲ್ಲಿ ಸ್ಪರ್ಧಿಸುವುದು ಎಂಬುದಾಗಿ ಸಯೀದ್ ಈಗಾಗಲೇ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.
ನೂತನ ಪಕ್ಷಕ್ಕೆ ಮಾನ್ಯತೆ ನೀಡುವಂತೆ ಕೋರಿ ಎಂಎಂಎಲ್ ಸಲ್ಲಿಸಿರುವ ಅರ್ಜಿಯನ್ನು ಪಾಕಿಸ್ತಾನದ ಚುನಾವಣಾ ಆಯೋಗ ಅಕ್ಟೋಬರ್‌ನಲ್ಲಿ ತಿರಸ್ಕರಿಸಿದೆ.
ಇದನ್ನು ಪ್ರಶ್ನಿಸಿ ಎಂಎಂಎಲ್ ನ್ಯಾಯಾಲಯದ ಮೆಟ್ಟಿಲೇರಿದೆ.
ಇತ್ತೀಚೆಗೆ ನ್ಯಾಯಾಲಯದ ನೋಟಿಸ್‌ಗೆ ಉತ್ತರಿಸಿರುವ ಪಾಕಿಸ್ತಾನ ಸರಕಾರ, ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಬಿಂಬಿಸಲ್ಪಟ್ಟಿರುವ ಸಯೀದ್‌ನ ಪಕ್ಷಕ್ಕೆ ಮಾನ್ಯತೆ ನೀಡಿದರೆ ರಾಜಕೀಯದಲ್ಲಿ ಹಿಂಸೆ ಮತ್ತು ಉಗ್ರವಾದಕ್ಕೆ ಆಸ್ಪದ ನೀಡಿದಂತಾಗುವುದು ಎಂದು ಹೇಳಿದೆ.