ಅಫ್ಘಾನ್: ಗುಪ್ತಚರ ಸಂಸ್ಥೆ ಮೇಲೆ ದಾಳಿ; 6 ಸಾವು

Update: 2017-12-25 17:12 GMT

ಕಾಬೂಲ್, ಡಿ. 25: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಅಫ್ಘಾನ್ ಗುಪ್ತಚರ ಸಂಸ್ಥೆಯ ಆವರಣದ ಸಮೀಪ ನಡೆದ ಆತ್ಮಹತ್ಯಾ ಭಯೋತ್ಪಾದಕ ದಾಳಿಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದಾರೆ.

ನ್ಯಾಶನಲ್ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿ (ಎನ್‌ಡಿಎಸ್)ಯ ಆವರಣದಲ್ಲಿರುವ ಕಚೇರಿಗಳಿಗೆ ಉದ್ಯೋಗಿಗಳು ಆಗಮಿಸುತ್ತಿದ್ದಾಗ ಭಯೋತ್ಪಾದಕನು ತನ್ನನ್ನು ತಾನು ಸ್ಫೋಟಿಸಿಕೊಂಡನು.

ಸ್ಫೋಟದಿಂದಾಗಿ ಕಾರೊಂದರಲ್ಲಿದ್ದ 6 ನಾಗರಿಕರು ಮೃತಪಟ್ಟರು ಎಂದು ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News