ಕೊರಿಯ ಬಿಕ್ಕಟ್ಟು ನಿವಾರಣೆಗೆ ರಚನಾತ್ಮಕ ಕ್ರಮಗಳ ಅಗತ್ಯ: ಚೀನಾ

Update: 2017-12-25 17:20 GMT

ಬೀಜಿಂಗ್, ಡಿ. 25: ಉತ್ತರ ಕೊರಿಯದ ಪರಮಾಣು ಬಿಕ್ಕಟ್ಟಿಗೆ ಸಂಬಂಧಿಸಿದ ಬಿಕ್ಕಟ್ಟನ್ನು ನಿವಾರಿಸಲು ರಚನಾತ್ಮಕ ಕ್ರಮಗಳ ಅಗತ್ಯವಿದೆ ಎಂದು ಚೀನಾ ಸೋಮವಾರ ಹೇಳಿದೆ.

ತನ್ನ ವಿರುದ್ಧ ಹೊಸದಾಗಿ ವಿಧಿಸಲಾಗಿರುವ ದಿಗ್ಬಂಧನಗಳು ಯುದ್ಧ ಘೋಷಣೆಯಾಗಿದೆ ಹಾಗೂ ಸಂಪೂರ್ಣ ಆರ್ಥಿಕ ದಿಗ್ಬಂಧನಕ್ಕೆ ಸಮವಾಗಿದೆ ಎಂಬುದಾಗಿ ಉತ್ತರ ಕೊರಿಯ ಹೇಳಿದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಉತ್ತರ ಕೊರಿಯವು ಇತ್ತೀಚೆಗೆ ನಡೆಸಿದ ಸುದೀರ್ಘ ವ್ಯಾಪ್ತಿಯ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆಗೆ ಪ್ರತಿಯಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

 ವಿಶ್ವಸಂಸ್ಥೆಯ ನಿರ್ಣಯವು ದಿಗ್ಬಂಧನಗಳನ್ನು ಸೂಕ್ತವಾಗಿ ಗಟ್ಟಿಗೊಳಿಸಿದೆ, ಆದರೆ, ಸಾಮಾನ್ಯ ಜನತೆ ಹಾಗೂ ಸಾಮಾನ್ಯ ಆರ್ಥಿಕ ವ್ಯವಹಾರಗಳು ಮತ್ತು ಸಹಕಾರದ ಮೇಲೆ ಪರಿಣಾಮ ಬೀರುವಂತೆ ಅದನ್ನು ರೂಪಿಸಲಾಗಿಲ್ಲ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News