ಕರ್ನಾಟಕದ ಅಂತರ್ಜಲ ಮಟ್ಟದ ಪರಿಸ್ಥಿತಿ ದಿಗಿಲು ಹುಟ್ಟಿಸುವಂತಿರುವುದು ಯಾಕೆ?: ಇಲ್ಲಿದೆ ಮಾಹಿತಿ
Update: 2017-12-26 22:10 IST
ಹೊಸದಿಲ್ಲಿ, ಡಿ. 26: ದೇಶದಲ್ಲಿ 150 ಮೀಟರ್ ಆಳದ ಕೊಳವೆ ಬಾವಿಗಳ ಸಂಖ್ಯೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಹೊಂದಿರುವುದರಿಂದ ಇಲ್ಲಿ ಅಂತರ್ಜಲ ಮಟ್ಟದ ಪರಿಸ್ಥಿತಿ ದಿಗಿಲು ಹುಟ್ಟಿಸುವ ಸ್ಥಿತಿಯಲ್ಲಿದೆ.
ಕರ್ನಾಟಕದಲ್ಲಿ 70 ಮೀಟರ್ ಆಳವಿರುವ 1,18,763 ಹಾಗೂ 150 ಮೀಟರ್ ಆಳವಿರುವ 40,186 ಕೊಳವೆ ಬಾವಿಗಳು ಇವೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ನಡೆಸಿದ ಇತ್ತೀಚೆಗಿನ ನೀರಾವರಿ ಸಮೀಕ್ಷೆ ಹೇಳಿದೆ.
150 ಮೀಟರ್ ಆಳದ 1,06,002 ಕೊಳವೆ ಬಾವಿಗಳನ್ನು ಹೊಂದಿರುವ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಅನಂತರದ ಸ್ಥಾನವನ್ನು ಆಂಧ್ರಪ್ರದೇಶ (91,652) ಹಾಗೂ ತಮಿಳುನಾಡು (61,984) ಹೊಂದಿದೆ.
ಕರ್ನಾಟಕದಲ್ಲಿ ಆಳದ ಕೊಳವೆ ಬಾವಿಗಳು ಕೋಲಾರ, ಚಾಮರಾಜನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದೆ.