2014ರಿಂದ ವಿದೇಶಿ ಪೌರತ್ವ ಪಡೆದ ಭಾರತೀಯರ ಸಂಖ್ಯೆ ಎಷ್ಟು ಗೊತ್ತೇ ?
Update: 2017-12-27 20:49 IST
ಹೊಸದಿಲ್ಲಿ, ಡಿ. 27: 2014ರಿಂದ ಇಂದಿನ ದಿನಾಂಕದ ವರೆಗೆ 4.5 ಲಕ್ಷಕ್ಕೂ ಅಧಿಕ ಭಾರತೀಯರು 117 ರಾಷ್ಟ್ರಗಳಲ್ಲಿ ವಿದೇಶಿ ಪೌರತ್ವ ಪಡೆದಿದ್ದಾರೆ ಎಂದು ಬುಧವಾರ ಸರಕಾರ ಹೇಳಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್, 2016ರಲ್ಲಿ ಒಟ್ಟು 46,188 ಹಾಗೂ 2015ರಲ್ಲಿ 42,213 ಭಾರತೀಯರು ವಿದೇಶಿ ಪೌರತ್ವ ಪಡೆದುಕೊಂಡಿದ್ದಾರೆ ಎಂದರು.
2014ರಿಂದ 2017 (ಇಂದಿನ ದಿನಾಂಕದ ವರೆಗೆ) 4,52,109 ಭಾರತೀಯರು 117 ರಾಷ್ಟ್ರಗಳಲ್ಲಿ ವಿದೇಶಿ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಪ್ರಕಟಿಸಿದ ವಲಸೆ ದತ್ತಾಂಶದ 2016 ವಾರ್ಷಿಕ ಪುಸ್ತಕದ ಪ್ರಕಾರ ಕ್ಯಾಲಿಫೋರ್ನಿಯಾದಲ್ಲಿ 10,298, ನ್ಯೂಜೆರ್ಸಿಯಲ್ಲಿ 5,312, ಟೆಕ್ಸಾಸ್‌ನಲ್ಲಿ 4,670 ಹಾಗೂ ನ್ಯೂಯಾರ್ಕ್‌ನಲ್ಲಿ 2,954 ಭಾರತೀಯರು ಪೌರತ್ವ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.