ಬಹುಭಾಷಾ ನಟಿ ಪಾರ್ವತಿ ಮೆನನ್ ಗೆ ಬೆದರಿಕೆ: ಓರ್ವನ ಬಂಧನ

Update: 2017-12-27 16:39 GMT

ತಿರುವನಂತಪುರಂ, ಡಿ.27: ಸಾಮಾಜಿಕ ಜಾಲತಾಣದಲ್ಲಿ ತನಗೆ ಅತ್ಯಾಚಾರ, ಆ್ಯಸಿಡ್ ದಾಳಿಗಳಂತಹ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬಹುಭಾಷಾ ನಟಿ ಪಾರ್ವತಿ ಮೆನನ್ ಪೊಲೀಸರಿಗೆ ದೂರು ನೀಡಿದ್ದು, 23 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಚಿತ್ರವೊಂದರ ಸಂಭಾಷಣೆಯ ಬಗ್ಗೆ ಪಾರ್ವತಿ ಮೆನನ್ ವಿರೋಧ ವ್ಯಕ್ತಪಡಿಸಿದ್ದ ನಂತರ ನಟಿಗೆ ಬೆದರಿಕೆಗಳು ಬರಲಾರಂಭಿಸಿತ್ತು. ಬಂಧಿತ ಯುವಕನನ್ನು ಸಿ.ಎಸ್. ಪಿಂಟೋ ಎಂದು ಗುರುತಿಸಲಾಗಿದೆ.

ಚಿತ್ರೋತ್ಸವ ಒಂದರಲ್ಲಿ ಭಾಗವಹಿಸಿದ್ದ ಪಾರ್ವತಿ ಮಮ್ಮುಟ್ಟಿ ನಟನೆಯ ‘ಕಸಬಾ’ ಚಿತ್ರದ ಸಂಭಾಷಣೆಯೊಂದನ್ನು ವಿರೋಧಿಸಿದ್ದರು, ಚಿತ್ರದಲ್ಲಿರುವ ಸಂಭಾಷಣೆಯು ಮಹಿಳೆಯರನ್ನು ಅವಹೇಳನ ಮಾಡಿದೆ ಎಂದವರು ಹೇಳಿದ್ದರು. ಆನಂತರ ಸಾಮಾಜಿಕ ಜಾಲತಾಣದಾದ್ಯಂತ ಪಾರ್ವತಿಯವರಿಗೆ ನಿಂದನೆ, ಅತ್ಯಾಚಾರ, ಆ್ಯಸಿಡ್ ದಾಳಿಯಂತಹ ಬೆದರಿಕೆಗಳನ್ನು ಕೆಲ ದುಷ್ಕರ್ಮಿಗಳು ಒಡ್ಡತೊಡಗಿದ್ದರು, ಈ ಬಗ್ಗೆ ಪಾರ್ವತಿ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News