10 ಲಕ್ಷಕ್ಕೂ ಹೆಚ್ಚು ‘ಅನ್‌ಲಿಸ್ಟೆಡ್’ ಖಾಸಗಿ ಸಂಸ್ಥೆಗಳು ಅಸ್ತಿತ್ವದಲ್ಲಿ

Update: 2017-12-29 17:24 GMT

ಹೊಸದಿಲ್ಲಿ, ಡಿ.29: ದೇಶದಲ್ಲಿ ಸುಮಾರು 10.68 ಲಕ್ಷ ಖಾಸಗಿ ಸಕ್ರಿಯ ‘ಅನ್‌ಲಿಸ್ಟೆಡ್’ ಸಂಸ್ಥೆಗಳು ಹಾಗೂ 66,063 ಸಾರ್ವಜನಿಕ ಕ್ಷೇತ್ರದ ಸಕ್ರಿಯ ‘ಅನ್‌ಲಿಸ್ಟೆಡ್’ ಸಂಸ್ಥೆಗಳು ಅಸ್ತಿತ್ವದಲ್ಲಿವೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.

ಖಾಸಗಿ ‘ಅನ್‌ಲಿಸ್ಟೆಡ್’ ಸಂಸ್ಥೆಗಳಲ್ಲಿ 2,10,367 ಸಂಸ್ಥೆಗಳನ್ನು ಮಹಾರಾಷ್ಟ್ರದಲ್ಲಿ, 1,97,333 ಸಂಸ್ಥೆಗಳನ್ನು ದಿಲ್ಲಿಯಲ್ಲಿ ಹಾಗೂ 1,24,148 ಸಂಸ್ಥೆಗಳನ್ನು ಪಶ್ಚಿಮ ಬಂಗಾಲದಲ್ಲಿ ನೋಂದಣಿ ಮಾಡಲಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.

    ಸಾರ್ವಜನಿಕ ಕ್ಷೇತ್ರದ ಸಕ್ರಿಯ ಸಂಸ್ಥೆಗಳ ಪೈಕಿ 13,030 ಸಂಸ್ಥೆಗಳು ಮಹಾರಾಷ್ಟ್ರದಲ್ಲಿ, 11,607 ದಿಲ್ಲಿಯಲ್ಲಿ ಹಾಗೂ 9,311 ಸಂಸ್ಥೆಗಳು ಪಶ್ಚಿಮ ಬಂಗಾಲದಲ್ಲಿ ನೋಂದಣಿಯಾಗಿವೆ ಎಂದವರು ತಿಳಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದ ‘ಅನ್‌ಲಿಸ್ಟೆಡ್’ ಸಂಸ್ಥೆಗಳೂ ಇಲೆಕ್ಟ್ರಾನಿಕ್ಸ್ ಮಾಧ್ಯಮದ ಮೂಲಕ ಭದ್ರತಾ ಪತ್ರ(ಸೆಕ್ಯುರಿಟಿ)ಗಳ ವ್ಯವಹಾರ ನಡೆಸಬೇಕು ಎಂದು ಆದೇಶ ನೀಡುವ ಅಧಿಕಾರವನ್ನು ಕಂಪೆನಿಗಳ ಕಾಯ್ದೆ, 2013(ಸೆಕ್ಷನ್ 29)ರಡಿ ನೀಡಲಾಗಿದ್ದು , ಈ ಆದೇಶ ಜಾರಿಗೊಳಿಸುವ ಕುರಿತು ‘ಸೆಬಿ’ ಮತ್ತಿತರ ಸಂಸ್ಥೆಗಳೊಂದಿಗೆ ವಿತ್ತ ಸಚಿವಾಲಯವು ಮಾತುಕತೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News