ರಾಹುಲ್ ಗಾಂಧಿ ವಿರುದ್ಧದ ಹಕ್ಕುಚ್ಯುತಿ ಸೂಚನೆ ಲೋಕಸಭಾ ಸ್ಪೀಕರ್‌ಗೆ ರವಾನೆ

Update: 2018-01-06 13:59 GMT

ಹೊಸದಿಲ್ಲಿ,ಜ.6: ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಅಣಕಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿಯು ಸಲ್ಲಿಸಿರುವ ಹಕ್ಕುಚ್ಯುತಿ ಸೂಚನೆಯನ್ನು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಕಳುಹಿಸಿದ್ದಾರೆ. ರಾಹುಲ್ ಲೋಕಸಭೆಯ ಸದಸ್ಯರಾಗಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.

  ರಾಹುಲ್ ಟ್ವೀಟೊಂದರಲ್ಲಿ ಜೇಟ್ಲಿ ಅವರ ಹೆಸರನ್ನು ‘ಉದ್ದೇಶಪೂರ್ವಕವಾಗಿ ಮತ್ತು ಅಗೌರವಪೂರ್ವಕವಾಗಿ ತಿರುಚಿದ್ದಾರೆ ’ ಎಂದು ಆರೋಪಿಸಿ ಬಿಜೆಪಿಯ ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ಅವರು ಡಿ.28ರಂದು ಅವರ ವಿರುದ್ಧ ಹಕ್ಕುಚ್ಯುತಿ ಸೂಚನೆಯನ್ನು ಸಲ್ಲಿಸಿದ್ದರು.

ಗುಜರಾತ್ ಚುನಾವಣಾ ಫಲಿತಾಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದೊಂದಿಗೆ ಸಂಚು ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದಾಗ ಅವರು ರಾಷ್ಟ್ರಕ್ಕೆ ಸಿಂಗ್ ಅವರ ಬದ್ಧತೆಯನ್ನು ಪ್ರಶ್ನಿಸಿರಲಿಲ್ಲ ಎಂಬ ಜೇಟ್ಲಿಯವರ ಹೇಳಿಕೆಯನ್ನು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದ ರಾಹುಲ್, ಅವರನ್ನು ಜೇಟ್‌‘ಲೈ’ ಎಂದು ಸಂಬೋಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News