ಉತ್ತರಪ್ರದೇಶ ಚಳಿ: ಸಾವಿನ ಸಂಖ್ಯೆ 100ಕ್ಕೆ ಏರಿಕೆ

Update: 2018-01-07 13:52 GMT

ಲಕ್ನೋ, ಜ. 7: ಚಳಿಗೆ ಸಂಬಂಧಿಸಿದ ಘಟನೆಗಳಿಂದ ಮೃತರಾದವರ ಸಂಖ್ಯೆ 100 ದಾಟಿರುವ ಹೊರತಾಗಿಯೂ ಉತ್ತರಪ್ರದೇಶದಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.

ರಾಜ್ಯದ ದೊಡ್ಡ ಭಾಗ ಶೀತ ಮಾರುತದ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ ಹಾಗೂ ಕನಿಷ್ಠ ಉಷ್ಣಾಂಶ 3-7 ಡಿಗ್ರಿ ಸೆಲ್ಸಿಯಸ್ ನಡುವೆ ತೊಯ್ದಿಡುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ಚಳಿಗೆ ಸಂಬಂಧಿಸಿದ ಘಟನೆಗಳಲ್ಲಿ ವೃದ್ಧರು ಹಾಗೂ ವಸತಿರಹಿತ 40ಕ್ಕೂ ಅಧಿಕ ಬಡವರು ಮೃತಪಟ್ಟಿದ್ದಾರೆ.

ಮಂಜುಹೊಗೆ ತುಂಬಿಕೊಂಡಿರುವುದರಿಂದ ದೂರ ಸಂಚರಿಸುವ ಹೆಚ್ಚಿನ ರೈಲುಗಳು 10ರಿಂದ 12 ಗಂಟೆಗಳ ಕಾಲ ತಡವಾಗಿ ಸಂಚರಿಸುತ್ತಿದೆ. ಕೆಲವು ರೈಲುಗಳ ಸಂಚಾರ ರದ್ದುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News