ಪಂಜಾಬ್, ಹರ್ಯಾಣ, ಚಂಡಿಗಢದಲ್ಲಿ ತೀವ್ರಗೊಂಡ ಶೀತಮಾರುತ

Update: 2018-01-07 14:45 GMT

ಚಂಡಿಗಢ, ಜ. 7: ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ಕಳೆದ ಒಂದು ವಾರಗಳಿಂದ ಬೀಸುತ್ತಿರುವ ಶೀತ ಮಾರುತ ರವಿವಾರ ತೀವ್ರಗೊಂಡಿದ್ದು, ಹೆಚ್ಚಿನ ಸ್ಥಳಗಳಲ್ಲಿ ಕನಿಷ್ಠ ಉಷ್ಣಾಂಶ 2-5 ಡಿಗ್ರಿ ಸೆಲ್ಸಿಯಸ್ ನಡುವೆ ಹೊಯ್ದಿಡುತ್ತಿದೆ.

ಎರಡೂ ರಾಜ್ಯಗಳಲ್ಲಿ ಅತ್ಯಂತ ಶೀತ ಪ್ರದೇಶ ಪಂಜಾಬ್‌ನ ಆದಂಪುರ. ಇಲ್ಲಿ ಉಷ್ಣಾಂಶ 0.7 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೊರೆಯುವ ಚಳಿ ಹರ್ಯಾಣದ ನರ್ನೌಲ್‌ಗೆ ಕೂಡ ವ್ಯಾಪಿಸುತ್ತಿದೆ. ಇಲ್ಲಿ ಅತೀ ಕಡಿಮೆ ಉಷ್ಣಾಂಶ 1.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರೋಟಕ್, ಹಿಸ್ಸಾರ್, ಭಿವಾನಿ ಸೇರಿದಂತೆ ದಕ್ಷಿಣ ಹರ್ಯಾಣ ಹಾಗೂ ಪಂಜಾಬ್‌ನ ಪ್ರತ್ಯೇಕ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮಂಜು ಮಾಯವಾಗಿದೆ. ಶುಭ್ರ ಆಕಾಶದಿಂದ ಕನಿಷ್ಠ ಉಷ್ಣಾಂಶ ಇದ್ದಕ್ಕಿದ್ದಂತೆ ಇಳಿಕೆ ಹಾಗೂ ಗರಿಷ್ಠ ಉಷ್ಣಾಂಶ ನಿಧಾನವಾಗಿ ಏರಿಕೆ ಆಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಹರ್ಯಾಣ ಹಾಗೂ ಪಂಜಾಬ್‌ದ ಉಳಿದ ಭಾಗಗಳಲ್ಲಿ ಮಂಜು ಮಾಯವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೀವ್ರ ಚಳಿ ಪಂಜಾಬ್‌ನ ಅಮೃತಸರಕ್ಕೂ ಹಬ್ಬುತ್ತಿದೆ. ಇಲ್ಲಿ 2.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News