×
Ad

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ: ಉತ್ತರಾಖಂಡ್ ಹೈಕೋರ್ಟ್ ಸಲಹೆ

Update: 2018-01-07 20:54 IST

ನೈನಿತಾಲ್,ಜ.7: ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ಅತ್ಯಾಚಾರದಂತಹ ಅಪರಾಧಗಳನ್ನು ಎಸಗಲು ಮುಂದಾಗುವವರಿಗೆ ಭೀತಿಯನ್ನು ಹುಟ್ಟಿಸಲು ಅಪರಾಧಿಗಳಿಗೆ ಗಲ್ಲುಶಿಕ್ಷೆಯನ್ನು ವಿಧಿಸಲು ರಾಜ್ಯ ಸರಕಾರವು ಕಾನೂನೊಂದನ್ನು ತರಬೇಕು ಎಂದು ಉತ್ತರಾಖಂಡ್ ಉಚ್ಚ ನ್ಯಾಯಾಲಯವು ಸಲಹೆ ನೀಡಿದೆ.

2016, ಜೂನ್‌ನಲ್ಲಿ ಎಂಟರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಲೆಮಾಡಿದ್ದ ವ್ಯಕ್ತಿಗೆ ಕೆಳ ನ್ಯಾಯಾಲಯವು ವಿಧಿಸಿರುವ ಮರಣದಂಡನೆಯನ್ನು ಎತ್ತಿ ಹಿಡಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ರಾಜೀವ ಶರ್ಮಾ ಮತ್ತು ಅಲೋಕ್ ಸಿಂಗ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚುತ್ತಿರುವುದನ್ನು ಬೆಟ್ಟು ಮಾಡಿದ ಪೀಠವು, 15 ವರ್ಷ ಅಥವಾ ಅದಕ್ಕೂ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಸಗಿರುವುದು ಸಾಬೀತಾಗಿರುವ ದೋಷಿಗಳಿಗೆ ಮರಣ ದಂಡನೆಯನ್ನು ವಿಧಿಸಲು ರಾಜ್ಯ ಸರಕಾರವು ಶಾಸನವನ್ನು ರೂಪಿಸಬಹುದಾಗಿದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News