×
Ad

ಇಸ್ರೋದಿಂದ ಜ.12ರಂದು 31 ಉಪಗ್ರಹಗಳ ಉಡಾವಣೆ

Update: 2018-01-08 19:52 IST

ಬೆಂಗಳೂರು,ಜ.8: ಇಸ್ರೋ ಭೂ ನಿರೀಕ್ಷಣಾ ಅಂತರಿಕ್ಷ ನೌಕೆ ಕಾರ್ಟೊಸ್ಯಾಟ್ ಸೇರಿದಂತೆ 31 ಉಪಗ್ರಹಗಳನ್ನು ಜ.12ರಂದು ಉಡಾವಣೆಗೊಳಿಸಲಿದೆ. ಈ ಹಿಂದೆ ಉಡಾವಣೆಗೆ ಜ.10ರ ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಗೊಳಿಸಲಾಗಿತ್ತು.

ಜ.12ರಂದು ಬೆಳಿಗ್ಗೆ 9:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ-140 ರಾಕೆಟ್‌ನ ಮೂಲಕ ಭಾರತದ ಕಾರ್ಟೊಸ್ಯಾಟ್-2, ಒಂದು ನ್ಯಾನೊ ಮತ್ತು ಒಂದು ಮೈಕ್ರೋ ಹಾಗೂ ಅಮೆರಿಕ ಮತ್ತು ಇತರ ಐದು ರಾಷ್ಟ್ರಗಳ 28 ಉಪಗ್ರಹಗಳು ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಗೊಳಿಸಲಾಗುವುದು ಎಂದು ಇಸ್ರೋದ ಸಾರ್ವಜನಿಕ ಸಂಪರ್ಕಾಧಿಕಾರಿ ದೇವಿಪ್ರಸಾದ್ ಅವರು ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

 ಕಳೆದ ವರ್ಷದ ಆ.31ರಂದು ಭಾರತದ ಎಂಟನೇ ಪಥದರ್ಶಕ ಉಪಗ್ರಹವನ್ನು ಬಾಹ್ಯಾಕಾಶದ ಕಕ್ಷೆಯಲ್ಲಿ ಸೇರಿಸಲು ಇಂತಹುದೇ ರಾಕೆಟ್ ವಿಫಲಗೊಂಡ ಬಳಿಕ ಇದು 2018ನೇ ವರ್ಷದಲ್ಲಿ ಪಿಎಸ್‌ಎಲ್‌ವಿಯ ಮೊದಲ ಉಡಾವಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News