‘ಸ್ಪೇಸ್ ಎಕ್ಸ್’ನಿಂದ ಅಮೆರಿಕದ ನಿಗೂಢ ಉಪಕರಣ ಬಾಹ್ಯಾಕಾಶಕ್ಕೆ

Update: 2018-01-08 16:55 GMT

ಮಯಾಮಿ (ಅಮೆರಿಕ), ಜ. 8: ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ ಎಕ್ಸ್’ ರವಿವಾರ ಅಮೆರಿಕ ಸರಕಾರದ ನಿಗೂಢ ಉಪಕರಣವೊಂದನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ. ಈ ಉಪಕರಣದ ಸ್ವರೂಪ ಹಾಗೂ ಅದರ ಹಿಂದಿರುವ ಸಂಸ್ಥೆಯನ್ನು ರಹಸ್ಯವಾಗಿ ಇಡಲಾಗಿದೆ.

ಫ್ಲೋರಿಡದ ಕೇಪ್ ಕ್ಯಾನವರಲ್‌ನಲ್ಲಿರುವ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ರಾತ್ರಿ ಹೊತ್ತಿನಲ್ಲಿ ‘ಫಾಲ್ಕನ್ 9’ ರಾಕೆಟ್ ಮೇಲಕ್ಕೇರಿತು.

 ಈ ಉಡಾವಣೆಯು ನವೆಂಬರ್‌ನಲ್ಲಿ ನಡೆಯಬೇಕಾಗಿತ್ತು. ಆದರೆ, ಬಾಹ್ಯಾಕಾಶಕ್ಕೆ ಸೇರಲಿರುವ ಉಪಕರಣಕ್ಕೆ ಹೆಚ್ಚಿನ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ರಾಕೆಟನ್ನು ಹೆಚ್ಚಿನ ತಪಾಸಣೆಗೆ ಒಳಗಪಡಿಸುವುದಕ್ಕಾಗಿ ಉಡಾವಣೆಯನ್ನು ಮುಂದೂಡಲಾಗಿತ್ತು.

ಇಂಥ ವಿಶೇಷ ಸುರಕ್ಷತೆ ಮತ್ತು ನಿಗೂಢತೆಯ ಕಾರಣಗಳೇನು ಎನ್ನುವುದು ತಿಳಿದುಬಂದಿಲ್ಲ.

 ಈ ಉಪಕರಣವನ್ನು ಅಮೆರಿಕ ಸರಕಾರಕ್ಕಾಗಿ ನಿರ್ಮಿಸಲಾಗಿದೆ ಹಾಗೂ ಅದನ್ನು ತಗ್ಗಿನ ಭೂ ಕಕ್ಷೆಯಲ್ಲಿ ಇರಿಸಲಾಗುವುದು ಎಂದು ಅದನ್ನು ನಿರ್ಮಿಸಿರುವ ‘ನಾರ್ತ್‌ರಪ್ ಗ್ರಮನ್’ ಹೇಳಿದೆ. ಆದರೆ, ಹೆಚ್ಚಿನ ವಿವರಗಳನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News