ವಿಶ್ವದ ಅತಿದೊಡ್ಡ ಉದ್ಯಾನವನ ಭಾರತದ ಈ ನಗರದಲ್ಲಿ ನಿರ್ಮಾಣವಾಗಲಿದೆ

Update: 2018-01-12 15:48 GMT

ಮುಂಬೈ, ಜ.12: ಕೇಂದ್ರ ಮುಂಬೈಯಲ್ಲಿ ವಿಶ್ವದ ಅತೀ ದೊಡ್ಡ ಉದ್ಯಾನವನವನ್ನು ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 350 ಹೆಕ್ಟೇರ್‌ನಷ್ಟು ಜಮೀನನ್ನು ಮರುಸ್ವಾಧೀನಪಡಿಸಿಕೊಂಡು ಈ ಉದ್ಯಾನವನ ನಿರ್ಮಿಸಲಾಗುವುದು. ಮುಂಬೈಯ ಅಭಿವೃದ್ಧಿ ಯೋಜನೆಯಲ್ಲಿ ಈ ಪ್ರಸ್ತಾವನೆ ಒಳಗೊಂಡಿದೆ ಎಂದವರು ತಿಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ವಿಶೇಷ ಅಧಿಕಾರ ಬಳಸಿ ಈ ಪ್ರಸ್ತಾವನೆಗೆ ಶೀಘ್ರ ಅಂಗೀಕಾರ ದೊರಕಿಸಿಕೊಡಬೇಕು ಎಂದವರು ಒತ್ತಾಯಿಸಿದರು.

  ಯೋಜನೆಯಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದು, ಪರಿಸರ ಮಾಲಿನ್ಯಕ್ಕೆ ಆಸ್ಪದವಾಗದ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು, ಪರಿಸರ ಇಲಾಖೆಯಿಂದ ಅನುಮತಿ ಪತ್ರ ದೊರಕಿದ ತಕ್ಷಣ ಯೋಜನೆಯ ಕಾರ್ಯಾರಂಭ ಮಾಡಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.

  ಲಂಡನ್‌ನ ಹೈಡ್‌ಪಾರ್ಕ್‌ಗಿಂತಲೂ ದೊಡ್ಡದಾಗಿರುವ ಈ ಉದ್ಯಾನವನ 300 ಎಕರೆಗೂ ಹೆಚ್ಚಿನ ಪ್ರದೇಶವನ್ನು ವ್ಯಾಪಿಸಲಿದೆ. ಸೆವ್ರಿ ಬಳಿಯ ಹಾಜಿ ಬಂದರ್ ಬಳಿ ಭೂಮಿಯನ್ನು ಮರುಸ್ವಾಧೀನ ಪಡಿಸಿಕೊಂಡು ಈ ಉದ್ಯಾನವನ ನಿರ್ಮಿಸಲಾಗುವುದು ಎಂದು ಮುಂಬೈ ಪೋರ್ಟ್‌ಟ್ರಸ್ಟ್‌ನ ಅಧ್ಯಕ್ಷ ಸಂಜಯ್ ಭಾಟಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News