ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಿ

Update: 2018-01-12 18:01 GMT

ಮಾನ್ಯರೇ,

ಬೆಂಗಳೂರು ಮಹಾನಗರದ ಬಸವೇಶ್ವರನಗರ ಸಿದ್ದಯ್ಯಪುರಾಣಿಕ ರಸ್ತೆಯಲ್ಲಿ ನೂತನವಾಗಿ ಹೋಮಿಯೋಪಥಿ ಆಸ್ಪತ್ರೆ ಆರಂಭಿಸಲಾಗಿದೆ. ಆದರೆ ಈ ಆಸ್ಪತ್ರೆ ಜನೋಪಯೋಗಿಯಾಗುವ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನನೀಡಬೇಕಾಗಿದೆ.

ನಗರದ ಇಂದಿರಾ ಕ್ಲಿನಿಕ್‌ಗಳಲ್ಲಿ ರೋಗಿಗಳ ವಿವರಗಳನ್ನು ಗಣಕೀಕರಣಗೊಳಿಸಿ ಎಲ್ಲಿ ಬೇಕಾದರೂ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಬಹುದಾಗಿದೆ. ಇದೇ ಮಾದರಿಯಲ್ಲಿ ಹೋಮಿಯೋಪಥಿ ಆಸ್ಪತ್ರೆಯಲ್ಲಿ ಕೂಡಾ ರೋಗಿಗಳ ವಿವರ, ತಪಾಸಣೆ ಹಾಗೂ ನೀಡಲಾದ ಚಿಕಿತ್ಸೆಯ ಮಾಹಿತಿಯನ್ನು ಗಣಕೀಕರಣಗೊಳಿಸಿದರೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದಂತೆ ಎಲ್ಲ್ಲಾ ತಪಾಸಣೆಯನ್ನು ಮಾಡುವಂತಹ ಪ್ರಯೋಗಾಲಯ ಸ್ಥಾಪಿಸಿದರೆ, ಸಾರ್ವಜನಿಕರಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕೀತು.

-ಚಂದ್ರಶೇಖರ ಬೆಂಗಳೂರು

Writer - -ಚಂದ್ರಶೇಖರ ಬೆಂಗಳೂರು

contributor

Editor - -ಚಂದ್ರಶೇಖರ ಬೆಂಗಳೂರು

contributor

Similar News