ವಲಸಿಗ ಕಾರ್ಮಿಕರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುತ್ತಿರುವ ಕೇಂದ್ರ ಸರಕಾರ: ರಾಹುಲ್ ಗಾಂಧಿ ಟೀಕೆ

Update: 2018-01-14 13:09 GMT

ಹೊಸದಿಲ್ಲಿ,ಜ.14: ವಿಳಾಸದ ಪುರಾವೆಯನ್ನಾಗಿ ಪಾಸ್‌ಪೋರ್ಟ್‌ನ ಸಿಂಧುತ್ವವನ್ನು ರದ್ದುಗೊಳಿಸುವ ನಿರ್ಧಾರಕ್ಕಾಗಿ ರವಿವಾರ ಕೇಂದ್ರ ಸರಕಾರದ ವಿರುದ್ಧ ದಾಳಿಯನ್ನು ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಇದು ತಾರತಮ್ಯದ ಮನೋಭಾವವಾಗಿದೆ ಎಂದು ಬಣ್ಣಿಸಿದರು.

ಸರಕಾರವು ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ವಲಸಿಗ ಕಾರ್ಮಿಕರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಸರಕಾರದ ಈ ನಡೆಯು ತೋರಿಸುತ್ತಿದೆ ಮತ್ತು ಇದು ಸ್ವೀಕಾರಾರ್ಹವಲ್ಲ. ಈ ಕ್ರಮವು ಬಿಜೆಪಿಯ ತಾರತಮ್ಯದ ಮಾನಸಿಕತೆಯನ್ನು ತೋರಿಸುತ್ತಿದೆ ಎಂದು ಅವರು ಟೀಕಿಸಿದರು.

ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ಅದನ್ನು ಹೊಂದಿರುವವರ ವಿಳಾಸವನ್ನು ಮುದ್ರಿಸದಿರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ರ ಈ ಪ್ರತಿಕ್ರಿಯೆ ಹೊರಬಿದ್ದಿದೆ. ಸರಕಾರದ ಕ್ರಮದಿಂದಾಗಿ ಇನ್ನು ಮುಂದೆ ಪಾಸ್‌ಪೋರ್ಟ್‌ನ್ನು ವಿಳಾಸದ ಪುರಾವೆಯಾಗಿ ಬಳಸುವುದು ಸಾಧ್ಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News