ರಾಮಗಢದ ಐತಿಹಾಸಿಕ ಸ್ಮಶಾನವು ಜಾಗತಿಕ ಪ್ರವಾಸಿ ಕೇಂದ್ರವಾಗಲಿ : ಚೀನಾ ಬಯಕೆ

Update: 2018-01-14 14:10 GMT

ರಾಮಗಢ,ಜ.14: ಜಾರ್ಖಂಡ್‌ನ ರಾಮಗಢದಲ್ಲಿರುವ ಐತಿಹಾಸಿಕ ಸ್ಮಶಾನವನ್ನು ಜಾಗತಿಕ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಬೇಕೆಂದು ಚೀನಾ ಬಯಸಿದೆ ಎಂದು ಕೋಲ್ಕತಾದ ಚೀನಿ ದೂತಾವಾಸದ ಕಾನ್ಸುಲ್ ಜನರಲ್ ಎಂ.ಎ.ಝಾನ್ವು ಅವರು ಹೇಳಿದ್ದಾರೆ.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಮಿತ್ರಪಡೆಗಳ ಭಾಗವಾಗಿದ್ದ 667 ಚೀನಿ ಸೈನಿಕರನ್ನು ಈ ಸ್ಮಶಾನದಲ್ಲಿ ದಫನ ಮಾಡಲಾಗಿತ್ತು. ಝಾನ್ವು ನೇತೃತ್ವದ ಐವರು ದೂತಾವಾಸ ಅಧಿಕಾರಿಗಳ ತಂಡವು ಶುಕ್ರವಾರ ಈ ಸ್ಮಶಾನಕ್ಕೆ ಭೇಟಿ ನೀಡಿ ವಿಶ್ವಯುದ್ಧದ ಸಂದರ್ಭ ಜಪಾನಿ ಪಡೆಗಳ ವಿರುದ್ಧ ಹೋರಾಡಿ ಹುತಾತ್ಮರಾದ ಚೀನಿ ಸೈನಿಕರಿಗೆ ಗೌರವಗಳನ್ನು ಸಲ್ಲಿಸಿತು.

ಈ ಸಂದರ್ಭ ರಾಮಗಢ ನಗರಾಡಳಿತದೊಂದಿಗೆ ಮಾತನಾಡಿದ ಝುನ್ವಾ, ಈ ಐತಿಹಾಸಿಕ ಸ್ಮಶಾನವನ್ನು ಜಾಗತಿಕ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸುವಂತೆ ಚೀನಾ ರಾಜ್ಯ ಸರಕಾರವನ್ನು ಕೋರಿಕೊಂಡಿದೆ. ಈ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿರುವ ಚೀನಿ ಸೈನಿಕರು ಜಪಾನಿ ಪಡೆಗಳು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳದಂತೆ ತಡೆದಿದ್ದರು, ಹೀಗಾಗಿ ಇದು ಭಾರತ-ಚೀನಾ ಮೈತ್ರಿಯ ವೌನಸಾಕ್ಷಿಯಾಗಿದೆ. ಅಭಿವೃದ್ಧಿಗಾಗಿ ಚೀನಾ ಭಾರತ ಸರಕಾರದೊಂದಿಗೆ ಸಹಕರಿಸಲಿದೆ ಎಂದು ಹೇಳಿದರು.

ರಾಮಗಢದಿಂದ ನಾಲ್ಕು ಕಿ.ಮೀ.ದೂರದಲ್ಲಿರುವ ಚೀನಿ ಸ್ಮಶಾನವನ್ನು ದ್ವಿತೀಯ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದ ಯೋಧರ ಸ್ಮಾರಕಾರ್ಥ 1944,ಡಿಸೆಂಬರ್‌ನಲ್ಲಿ ಜ.ತುಂಗ್ ಕುಯೊ ಅವರು ನಿರ್ಮಿಸಿದ್ದರು. ಸುಮಾರು ಏಳೂಕಾಲು ಎಕರೆ ವಿಸ್ತೀರ್ಣವನ್ನು ಹೊಂದಿರುವ ಸ್ಮಶಾನವು ಅರಣ್ಯ ಪ್ರದೇಶದಿಂದ ಆವೃತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News