1 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ: ಒಬ್ಬನ ಬಂಧನ

Update: 2018-01-16 11:29 GMT

ಮುಕ್ಕಂ(ಕಲ್ಲಿಕೋಟೆ), ಜ.16:  ಒಂದು ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ಮಧ್ಯಪ್ರದೇಶದ ವ್ಯಕ್ತಿಯೊಬ್ಬನಿಂದ ತಾಮರಶ್ಶೇರಿ ಡಿವೈಎಸ್ಪಿ ಪಿಸಿ ಜೀವನ್‍ ನೇತೃತ್ವದ ಪೊಲೀಸರ ತಂಡ ವಶಪಡಿಸಿದೆ. ಮಧ್ಯಪ್ರದೇಶದ ಮನ್ಸೂರ್ ಜಿಲ್ಲೆಯ ರಿಯಾಝ್ ಅಹ್ಮದ್(49) ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಮಲಯೋರಂ ಬಾರ್‍ ಹೋಟೆಲ್‍ನ ಸಮೀಪದಲ್ಲಿ ಮಾದಕವಸ್ತುಗಳ ಪ್ಯಾಕೆಟ್‍ಗಳೊಂದಿಗೆ ಅಲೆದಾಡುತ್ತಿದ್ದಾಗ ಆರೋಪಿಯನ್ನು ಬಂಧಿಸಿ, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು   ಎಂದು ತಾಮರಶ್ಶೇರಿ ಡಿವೈಎಸ್ಪಿ ಸಜೀವನ್ ಮತ್ತು ಮಕ್ಕಂ ಎಸ್ಸೈ ಅಭಿಲಾಷ್ ಪತ್ರಿಕಾಗೋಷ್ಠಿಯಲ್ಲಿತಿಳಿಸಿದ್ದಾರೆ.

ಬ್ಯಾಗ್‍ನಲ್ಲಿದ್ದ ಚಪ್ಪಲಿಯಲ್ಲಿ ಮಾದಕವಸ್ತು ಪ್ಯಾಕೆಟ್‍ಗಳನ್ನು ಅಡಗಿಸಿಡಲಾಗಿತ್ತು.  ವಶಪಡಿಸಿಕೊಳ್ಳಲಾಗಿರುವ  ಮಾದಕವಸ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿ ಬೆಲೆಬಾಳುತ್ತದೆ. ಇದನ್ನು ಕಾಸರಗೋಡಿನಿಂದ ತಿರುವನಂತಪುರಂವರೆಗೆ ವಿತರಿಸಲು ತಂದಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಗೆ ಮಧ್ಯಪ್ರದೇಶದ  ಮನ್ಸೂರ ಮತ್ತು ರಾಜಸ್ಥಾನದಲ್ಲಿ ಮಾದಕವಸ್ತು ಉತ್ಪಾದಿಸುವ ಗಿಡಗಳ ಹೊಲ ಇವೆ. ಆರೋಪಿಯ ಸಹೋದರ ಮುಂಬೈಯಲ್ಲಿಮಾದಕವಸ್ತು ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಬಹಳ ಕಾಲದಿಂದ ಈತ ಕೇರಳದಾದ್ಯಂತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಎನ್ನಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News