×
Ad

ಪತ್ನಿಯೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡಿದ ನೆತನ್ಯಾಹು

Update: 2018-01-16 19:36 IST

ಲಕ್ನೊ, ಜ. 16: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ ತಾಜ್‌ಮಹಲ್ ವೀಕ್ಷಿಸಲು ಮಂಗಳವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದರು. ಇಸ್ರೇಲ್ ಪ್ರಧಾನಿ ಹಾಗೂ ಅವರ ಪತ್ನಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸ್ವಾಗತಿಸಿದರು. ನೆತನ್ಯಾಹು ದಂಪತಿ ಹಾಗೂ ನಿಯೋಗ ತಾಜ್ ಸಿಟಿಯಲ್ಲಿರುವ ಅಮರ್ ವಿಲಾಸ್ ಹೊಟೇಲ್‌ಗೆ ತೆರಳಿದರು.

ಅನಂತರ ನೆತನ್ಯಾಹು ದಂಪತಿ ತಾಜ್‌ಮಹಲ್‌ಗೆ ತೆರಳಿದರು. ಅಲ್ಲಿ ಕೆಲವು ಗಂಟೆ ಕಳೆದರು ಎಂದು ಜಿಲ್ಲಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಯಮುನಾ ನದಿ ತೀರದಲ್ಲಿರುವ ತಾಜ್‌ಮಹಲ್‌ನ್ನು ನೆತನ್ಯಾಹು ದಂಪತಿ ವೀಕ್ಷಿಸಲು ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಸಾಮಾನ್ಯ ಪ್ರವಾಸಿಗರಿಗೆ ಪ್ರವೇಶಿ ನಿಷೇಧಿಸಲಾಗಿತ್ತು.

ತಾಜ್‌ಮಹಲ್‌ನ 500 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದ ಜನರು ಹಾಗೂ ಕಾರುಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.

 ನೆತನ್ಯಾಹು ದಂಪತಿಯನ್ನು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ತಾಜ್‌ಮಹಲ್ ಸುತ್ತುಮುತ್ತ ಕರೆದೊಯ್ದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News