×
Ad

ವಾರ್ಷಿಕೋತ್ಸವದಲ್ಲಿ ‘ಪದ್ಮಾವತ್’ ಚಿತ್ರದ ಹಾಡಿಗೆ ನೃತ್ಯ: ದುಷ್ಕರ್ಮಿಗಳಿಂದ ಶಾಲೆಯ ಮೇಲೆ ದಾಳಿ

Update: 2018-01-16 19:42 IST

ರತ್ಲಾಂ(ಮ.ಪ್ರ),ಜ.16: ರತ್ಲಾಂ ಜಿಲ್ಲೆಯ ಜವೋರಾದ ಸೈಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಸೋಮವಾರ ವಾರ್ಷಿಕ ದಿನಾಚರಣೆಯ ಸಂದರ್ಭದಲ್ಲಿ ‘ಪದ್ಮಾವತ್’ ಚಿತ್ರದ ‘ಘೂಮರ್’ ಹಾಡಿಗೆ ನೃತ್ಯ ಮಾಡಿದ್ದಕ್ಕಾಗಿ ರಜಪೂತ ಕರ್ಣಿ ಸೇನಾದ ಸದಸ್ಯರೆನ್ನಲಾದ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಅಲ್ಲಿಗೆ ನುಗ್ಗಿ ದಾಧಲೆ ನಡೆಸಿದೆ. ಖುರ್ಚಿಗಳು, ವೇದಿಕೆ ಮತ್ತು ಸಂಗೀತ ವ್ಯವಸ್ಥೆಯನ್ನೂ ಗುಂಪು ಹಾಳುಗೆಡವಿದೆ.

ಘೂಮರ್ ಹಾಡಿಗೆ ವಿದ್ಯಾರ್ಥಿನಿಯೋರ್ವಳು ನರ್ತಿಸುತ್ತಿದ್ದಾಗ ನುಗ್ಗಿದ ಸಮೀಪದ ಭಗತ್ ಸಿಂಗ್ ಪಿಜಿ ಕಾಲೇಜಿನ 15-20 ವಿದ್ಯಾರ್ಥಿಗಳು ಮಕ್ಕಳನ್ನು ತಳ್ಳಿ ಹೆತ್ತವರು ಮತ್ತು ಶಿಕ್ಷಕರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಶಾಲಾ ಆಡಳಿತಕ್ಕೂ ಅವರು ಬೆದರಿಕೆಯೊಡ್ಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ಇಂತಹ ಘಟನೆಗಳನ್ನು ನಾವು ಖಂಡಿಸುತ್ತೇವೆ. ನಮ್ಮ ಸಮುದಾಯದ ಘನತೆಯ ರಕ್ಷಣೆಗಾಗಿ ನಾವು ಹೋರಾಡುತ್ತಿದ್ದೇವೆ, ಆದರೆ ನಾವು ಭೀತಿಯ ವಾತಾವರಣವನ್ನು ಸೃಷ್ಟಿಸುವುದಿಲ್ಲ. ನಮ್ಮ ಯಾವುದೇ ಸದಸ್ಯರು ಘಟನೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ರಜಪೂತ ಕರ್ಣಿ ಸೇನಾದ ಉಜ್ಜೈನ್ ಘಟಕದ ಸುರೇಂದ್ರ ಭಾಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News