ಝಡ್ ಪ್ಲಸ್ ಭದ್ರತೆ ಬಿಟ್ಟು ತೊಗಾಡಿಯಾ ಹೋದದ್ದು ಎಲ್ಲಿಗೆ: ಲಾಲೂ ಪ್ರಶ್ನೆ

Update: 2018-01-17 16:56 GMT
 ಸಾಂದರ್ಭಿಕ ಚಿತ್ರ

 ಪಾಟ್ನಾ, ಜ. 17: ಮೇವು ಹಗರಣದಲ್ಲಿ ಮೂರುವರೆ ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಹಜ್ ಸಬ್ಸಿಡಿ ಸ್ಥಗಿತಗೊಳಿಸಿರುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರದಾನಿ ನರೇಂದ್ರ ಮೋದಿ ತನ್ನ ಕ್ರಮಗಳ ಮೂಲಕ ಮುಸ್ಲಿಮರಿಗೆ ತೊಂದರೆ ಉಂಟು ಮಾಡುತ್ತಿ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮೇವು ಹಗರಣದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ಭಾ ತೊಗಾಡಿಯ ವಿರುದ್ಧ ಕೂಡ ಲಾಲು ಪ್ರಸಾದ್ ವಾಗ್ದಾಳಿ   ನಡೆಸಿದ್ದಾರೆ. ಝಡ್ ಪ್ಲಸ್ ಭದ್ರತೆ ಬಿಟ್ಟು ಅವರು ಹೋದದ್ದು ಎಲ್ಲಿಗೆ ಎಂದು ಲಾಲು ಪ್ರಸಾದ್ ಪ್ರಶ್ನಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗುವ ಮೊದಲು ಅವರು ಎಲ್ಲಿ ನಾಪತ್ತೆಯಾಗಿದ್ದರು ಎಂಬುದನ್ನು ಅವರು ಈಗಲಾದರೂ ಜನರಿಗೆ ತಿಳಿಸಬೇಕು ಎಂದು ಲಾಲು ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News