×
Ad

ಹರ್ಯಾಣದಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ

Update: 2018-01-18 21:00 IST

ಹರ್ಯಾಣ, ಜ.18: ನೆರೆಮನೆಯ ವ್ಯಕ್ತಿ ಸಹಿತ ಇಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ 20 ವರ್ಷದ ವಿವಾಹಿತ ಯುವತಿಯೊಬ್ಬಳು ಆರೋಪಿಸಿದ್ದಾಳೆ.

ಬುಧವಾರ ಘಟನೆ ನಡೆದಿದ್ದು, ಮನೆಯಲ್ಲಿ ತಾನು  ಒಂಟಿಯಾಗಿದ್ದೆ. ಇಬ್ಬರು ಆರೋಪಿಗಳು ಮನೆಯೊಳಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

6 ತಿಂಗಳ ಹಿಂದೆ ಈಕೆಯ ವಿವಾಹ ನೆರವೇರಿತ್ತು ಎನ್ನಲಾಗಿದೆ. “ನೆರೆಮನೆಯ ವ್ಯಕ್ತಿ ಹಾಗು ಮತ್ತೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು” ಎಂದು ಫತೇಹಬಾದ್ ಎಸ್ಪಿ ದೀಪಕ್ ಸಹಾರನ್ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದೀಚೆಗೆ ಹರ್ಯಾಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಕುರುಕ್ಷೇತ್ರ, ಪಾಣಿಪತ್, ಹಿಸಾರ್, ಜಿಂದ್ ಹಾಗು ಫರೀದಾಬಾದ್ ನಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News