ಇಮ್ರಾನ್ ಹಾಶ್ಮಿ ಈಗ ನಿರ್ಮಾಪಕ

Update: 2018-01-19 12:49 GMT

ಬಾಲಿವುಡ್‌ನಲ್ಲಿ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನೀಡಿರುವ ಇಮ್ರಾನ್ ಹಾಶ್ಮಿ ಇದೀಗ ನಿರ್ಮಾಪಕನಾಗಿಯೂ ತನ್ನ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಟಿಸಿರೀಸ್ ಹಾಗೂ ಎಲ್ಲಿಪ್ಸಿಸ್ ಎಂಟರ್‌ಟೈನ್‌ಮೆಂಟ್ ಜೊತೆ ಜಂಟಿಯಾಗಿ ಅವರು ‘ಚೀಟ್ ಇಂಡಿಯಾ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸೌಮಿಕ್ ಸೇನ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಇಮ್ರಾನ್ ಹಾಶ್ಮಿ ಸ್ವತಃ ನಾಯಕ. ಭಾರತೀಯ ಶಿಕ್ಷಣ ವ್ಯವಸ್ಥೆಯ ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರವು ಅದ್ಭುತವಾದ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಪ್ರೇಕ್ಷಕರನ್ನು ಸೀಟಿನ ಅಂಚಿನಲ್ಲಿ ಕುಳಿತುಕೊಳ್ಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲವೆಂದು ನಿರ್ದೇಶಕ ಸೇನ್ ಹೇಳಿಕೊಂಡಿದ್ದಾರೆ.

ಅತ್ಯಂತ ಸ್ಪರ್ಧಾತ್ಮಕ ವಾತಾವರಣವಿರುವ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕೆಂಬ ಒತ್ತಡಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಯ ಕಥೆಯನ್ನು ಈ ಚಿತ್ರ ಹೇಳುತ್ತದೆ ಎನ್ನುತ್ತಾರವರು. ನಾಯಕಿ ಸೇರಿದಂತೆ ಚಿತ್ರದ ಉಳಿದ ಪಾತ್ರಗಳ ಬಗ್ಗೆ ಸೌಮಿಕ್ ಸೇನ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆಯೆಂದು ಚಿತ್ರತಂಡದ ಅಂಬೋಣ.

‘ಚೀಟ್ ಇಂಡಿಯಾ’ದ ಚಿತ್ರೀಕರಣ ಸದ್ಯದಲ್ಲೇ ಆರಂಭಗೊಳ್ಳಲಿದ್ದು, 2019ರ ಫೆಬ್ರವರಿ ವೇಳೆಗೆ ಚಿತ್ರ ಬಿಡುಗಡೆಗೊಳಿಸುವ ಯೋಚನೆ ನಿರ್ಮಾಪಕರಿಗಿದೆ. ‘ಚೀಟ್ ಇಂಡಿಯಾ’ದ ಚಿತ್ರೀಕರಣ ಸದ್ಯದಲ್ಲೇ ಆರಂಭಗೊಳ್ಳಲಿದ್ದು, 2019ರ ಫೆಬ್ರವರಿ ವೇಳೆಗೆ ಚಿತ್ರ ಬಿಡುಗಡೆಗೊಳಿಸುವ ಯೋಚನೆ ನಿರ್ಮಾಪಕರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News