ಗಾಸಿಪ್‌ಗೆ ಗ್ರಾಸವಾದ ‘ಬಾಲ್ಡಿ’ ಅಕ್ಷಯ್

Update: 2018-01-20 04:18 GMT

ತನ್ನ ಚಿತ್ರಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುವುದರಲ್ಲಿ ಅಕ್ಷಯ್ ಕುಮಾರ್‌ಗೆ ಸರಿಸಾಟಿಯಿಲ್ಲ. ಆ್ಯಕ್ಷನ್-ಮಸಾಲಾ ಚಿತ್ರಗಳಲ್ಲಾಗಲಿ ಅಥವಾ ಸಾಮಾಜಿಕ ಜಾಗೃತಿಯ ಚಿತ್ರಗಳಾಗಿರಲಿ ಅಕ್ಷಯ್, ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ತಲುಪಲು ಯತ್ನಿಸಿದ್ದಾರೆ.

ಜನವರಿ 25ರಂದು ಬಿಡುಗಡೆಗೊಳ್ಳಲಿರುವ ‘ಪ್ಯಾಡ್‌ಮ್ಯಾನ್’ ಚಿತ್ರದ ಪ್ರಚಾರಾರ್ಥ ನಡೆದ ಕಾರ್ಯಕ್ರಮಗಳಲ್ಲಿ ಅಕ್ಷಯ್, ತಲೆಯನ್ನು ಬೋಳಿಸಿಕೊಂಡು ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿತ್ತು. ಅಕ್ಷಯ್ ಯಾಕಾದರೂ ತಲೆ ಬೋಳಿಸಿಕೊಂಡಿದ್ದಾರೆ?, ಮುಂದಿನ ಚಿತ್ರದಲ್ಲಿ ಅವರು ಬಾಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳನ್ನು ಹಾಗೂ ಮಾಧ್ಯಮ ಮಂದಿಯನ್ನು ಕಾಡಿದ್ದವು.

ಇನ್ನು ಕೆಲವರಂತೂ ಅಕ್ಷಯ್ ಬಕ್ಕತಲೆಯವರಾಗುತ್ತಿದ್ದು, ದಕ್ಷಿಣ ಆಫ್ರಿಕದಲ್ಲಿ ಕೃತಕ ಕೂದಲನ್ನು ಕಸಿಮಾಡಿಕೊಳ್ಳುವುದಕ್ಕಾಗಿ ತಲೆ ಬೋಳಿಸಿಕೊಂಡಿದ್ದಾರೆಂಬ ವದಂತಿಗಳನ್ನು ಕೂಡಾ ಹರಿಯಬಿಟ್ಟಿದ್ದರು. ಖಾಸಗಿ ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ‘ಪ್ಯಾಡ್‌ಮ್ಯಾನ್’ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅಕ್ಷಯ್ ಈ ಊಹಾಪೋಹಗಳಿಗೆಲ್ಲಾ ತೆರೆಯೆಳೆದಿದ್ದಾರೆ. ಈಗ ಚಿತ್ರೀಕರಣಗೊಳ್ಳುತ್ತಿರುವ ‘ಕೇಸರ್’ ಚಿತ್ರದಲ್ಲಿ ತಾನು ದೊಡ್ಡಗಾತ್ರದ ಪೇಟಾವನ್ನು ಧರಿಸಲಿರುವುದರಿಂದ ತಲೆಯಿಡೀ ಬೆಚ್ಚಗಾಗುತ್ತದೆ. ಇದರಿಂದ ನಟನೆಯಲ್ಲಿ ಗಮನಹರಿಸಲು ಕಷ್ಟಕರವಾಗುತ್ತಿದೆ. ಹೀಗಾಗಿ ಕೂದಲನ್ನು ಕತ್ತರಿಸಿಕೊಂಡಿದ್ದಾಗಿ ಅಕ್ಷಯ್ ಹೇಳಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News