ಪ್ರಭಾಸ್ ರ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ದೀಪಿಕಾ ನಾಯಕಿ?

Update: 2018-01-19 13:13 GMT

ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ‘ಬಾಹುಬಲಿ’ ಸರಣಿಯ ಚಿತ್ರಗಳ ಬಳಿಕ ದೇಶಾದ್ಯಂತ ಚಿತ್ರಪ್ರೇಮಿಗಳಿಗೆ ಚಿರಪರಿಚಿತನಾಗಿರುವ ತೆಲುಗಿನ ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ಪ್ರವೇಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದರ ಜೊತೆಜೊತೆಗೆ ಅವರ ಎದುರು ಅಭಿನಯಿಸಲಿರುವ ನಾಯಕಿ ಯಾರಾಗಿರಬಹುದೆಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

  ದೀಪಿಕಾ ಪಡುಕೋಣೆ

ಪ್ರಭಾಸ್‌ರ ಬಾಲಿವುಡ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಲಿದ್ದಾರೆಂಬ ಊಹಾಪೋಹಗಳು ಬಾಲಿವುಡ್‌ನ ಅಂಗಳದಲ್ಲಿ ಹರಿದಾಡುತ್ತಿವೆ. ಆದರೆ ದೀಪಿಕಾ ಈ ಬಗ್ಗೆ ಇನ್ನಷ್ಟೇ ಗ್ರೀನ್‌ಸಿಗ್ನಲ್ ನೀಡಬೇಕಾಗಿದೆಯಂತೆ. ಒಂದು ವೇಳೆ ದೀಪಿಕಾ, ಒ.ಕೆ. ಅನ್ನದಿದ್ದಲ್ಲಿ, ನಿರ್ಮಾಪಕರು ನಾಯಕಿ ಪಾತ್ರಕ್ಕೆ ಅಲಿಯಾಭಟ್ ಅಥವಾ ಕತ್ರಿನಾ ಕೈಫ್‌ರನ್ನು ಪರಿಗಣಿಸುವ ಸಾಧ್ಯತೆಯೂ ಇದೆಯೆಂಬ ಮಾತುಗಳು ಕೇಳಿಬರುತ್ತಿವೆ.

ಇದೀಗ ಭರದಿಂದ ಚಿತ್ರೀಕರಣಗೊಳ್ಳುತ್ತಿರುವ ತೆಲುಗು ಚಿತ್ರ ‘ಸಾಹೋ’ದಲ್ಲಿ, ಬಾಲಿವುಡ್ ನಟಿ ಶ್ರದ್ಧಾಕಪೂರ್ ಪ್ರಭಾಸ್‌ಗೆ ನಾಯಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News