ಮೌನಿಯ ‘ಬ್ರಹ್ಮಾಸ್ತ್ರ’

Update: 2018-01-19 13:51 GMT

‘ನಾಗಿನ್’, ‘ಕ್ಯೂ ಕಿ ಕಭಿ ಸಾಸ್ ಬಿ ಬಹು ಥಿ’ ಮತ್ತಿತರ ಹಿಂದಿ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿರುವ ಕಿರುತೆರೆ ನಟಿ ಮೌನಿ ರಾಯ್, ‘ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಕ್ಷಯ್ ಕುಮಾರ್ ಅಭಿನಯದ ‘ಗೋಲ್ಡ್’ ಬಿಡುಗಡೆಗೆ ಮೊದಲೇ ಮೌನಿಗೆ ಇನ್ನೊಂದು ಸುವರ್ಣಾವಕಾಶ ದೊರೆತಿದೆ. ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ದಲ್ಲಿ ಆಕೆ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಜೊತೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಮೂರು ಭಾಗಗಳಲ್ಲಿ ತಯಾರಾಗಲಿರುವ ‘ಬ್ರಹ್ಮಾಸ್ತ್ರ’ದ ಪಾರ್ಟ್ 1ರಲ್ಲಿ ಮೌನಿ, ಖಳನಾಯಕಿಯ ಆವತಾರವೆತ್ತಲಿದ್ದಾರಂತೆ. ರಣಬೀರ್ ಈ ಚಿತ್ರದಲ್ಲಿ ಸೂಪರ್ ಹೀರೋ ಆಗಿ ಮಿಂಚಲಿದ್ದು, ನಾಯಕಿಯಾಗಿ ಅಲಿಯಾ ಇದ್ದಾರೆ. ಟಿವಿ ಧಾರಾವಾಹಿ ‘ನಾಗಿನ್’ ನಲ್ಲಿ ಖಳನಾಯಕಿಯಾಗಿ ಹೆಸರು ಮಾಡಿದ್ದ ಮೌನಿ, ಈಗ ಬೆಳ್ಳಿತೆರೆಯಲ್ಲಿ ಹೇಗೆ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆಂಬುದನ್ನು ನೋಡಲು ಬಾಲಿವುಡ್ ಕಾದುಕುಳಿತಿದೆ. ‘ಬ್ರಹ್ಮಾಸ್ತ್ರ’ದ ಮೊದಲ ಭಾಗದಲ್ಲಿ ಅಮಿತಾಭ್ ಬಚ್ಚನ್ ನಟಿಸಲಿದ್ದು, ಚಿತ್ರವು 2019ರ ಆಗಸ್ಟ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News