ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಆಪ್ ಶಾಸಕರು

Update: 2018-01-19 14:41 GMT

ಹೊಸದಿಲ್ಲಿ, ಜ.19: ಲಾಭದಾಯಕ ಹುದ್ದೆಗಳನ್ನು ಹೊಂದಿದ 20 ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿರುವ ಚುನಾವಣಾ ಆಯೋಗದ ವಿರುದ್ಧ ಆಪ್ ಶಾಸಕರು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಜಸ್ಟಿಸ್ ಗೀತಾ ಮಿತ್ತಲ್ ನೇತೃತ್ವದ ಪೀಠದ ಮುಂದೆ ಅರ್ಜಿಯ್ನನು ಸಲ್ಲಿಸಲಾಗಿದೆ. ಈ ಬಗ್ಗೆ ಪತ್ರಕರ್ತರು ಚುನಾವಣಾ ಆಯೋಗದ ಮುಖ್ಯ ಕಮಿಷನರ್ ರನ್ನು ಸಂಪರ್ಕಿಸಿದ್ದು, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ

ಸರಕಾರ ಉರುಳಿಬೀಳುವ ಭಯವಿಲ್ಲದಿದ್ದರೂ 20 ಶಾಸಕರನ್ನು ಅನರ್ಹಗೊಳಿಸಿರುವ ಚುನಾವಣಾ ಆಯೋಗದ ನಡೆ ಆಪ್ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

“20 ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಪತಿಗಳಿಗೆ ಚುನಾವಣಾ ಆಯೋಗ ಪ್ರಸ್ತಾಪಿಸಿರುವ ವಿಚಾರ ನಮಗೆ ಮಾಧ್ಯಮಗಳಿಂದ ತಿಳಿಯಿತು. ಆದರೆ ಚುನಾವಣಾ ಆಯೋಗದ ಮುಂದೆ ಶಾಸಕರು ಹೇಳಿಕೆಗಳನ್ನು ನೀಡಲು ಅವಕಾಶ ನೀಡದೆ ಏಕಾಏಕಿ ಕೈಗೊಂಡಿರುವ ಕ್ರಮ ಸರಿಯಲ್ಲ” ಎಂದು ಆಪ್ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News