ಆನ್‌ಲೈನ್ ಮಾಹಿತಿಗಳಿಂದಾಗಿ ಕಂಪನಿಗಳು ಸಾರ್ವಜನಿಕರ ವೀಕ್ಷಣೆಗೆ ಮುಕ್ತ: ಜೇಟ್ಲಿ

Update: 2018-01-19 16:05 GMT

ಹೊಸದಿಲ್ಲಿ,ಜ.19: ಆನ್‌ಲೈನ್‌ನಲ್ಲಿ ಎಲ್ಲ ಮಾಹಿತಿಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವುದರಿಂದ ಅದು ಕಾರ್ಪೊರೇಟ್ ಸಂಸ್ಥೆಗಳಿಂದ ನಿಯಮ ಪಾಲನೆ ಮತ್ತು ಪಾರದರ್ಶಕತೆಯನ್ನು ಅನಿವಾರ್ಯವಾಗಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಇಲ್ಲಿ ಹೇಳಿದರು.

ಈ ಪಾರದರ್ಶಕತೆಯಿಂದಾಗಿ ಯಾವುದೇ ಅನುಚಿತ ನಡೆ ಪತ್ತೆಯಾಗುವ ಸಾಧ್ಯತೆಯು ತೀರ ಹೆಚ್ಚಿದೆ ಎಂದು ಕಂಪನಿಗಳಿಗೆ ಎಚ್ಚರಿಕೆ ನೀಡಿದ ಅವರು, ಸಾರ್ವಜನಿಕ ಅವಗಾಹನೆಗೆ ಮುಕ್ತವಾಗಿರುವುದು ತನ್ನದೇ ಆದ ಲಾಭಗಳನ್ನು ಹೊಂದಿದೆ. ಅನುಪಾಲನೆ ನಡೆಯುತ್ತದೆ ಎನ್ನವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರ ಮೇಲೂ ಒತ್ತಡವಿರುವುದು ಇದರ ಲಾಭವಾಗಿದೆ ಎಂದರು.

ರಾಷ್ಟ್ರೀಯ ಸಿಎಸ್‌ಆರ್ ಡಾಟಾ ಪೋರ್ಟಲ್ ಮತ್ತು ಕಾರ್ಪೊರೇಟ್ ಡಾಟಾ ಪೋರ್ಟ್‌ಲ್‌ಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಪಾರದರ್ಶಕತೆಯು ಇಡೀ ವ್ಯವಸ್ಥೆಗೆ ಮತ್ತು ಕಾರ್ಪೊರೇಟ್ ಭಾರತಕ್ಕೆ ಒಳ್ಳೆಯದು ಎಂದರು.

ಆನ್‌ಲೈನ್‌ನಲ್ಲಿ ನಿಮ್ಮ ವಿವರಗಳನ್ನು ಸಾಧ್ಯವಿರುವಷ್ಟು ಬಹಿರಂಗಗೊಳಿಸುವುದು ನಿಜಕ್ಕೂ ಒಳ್ಳೆಯ ಹೆಜ್ಜೆಯಾಗುತ್ತದೆ ಎಂದು ಜೇಟ್ಲಿ ಕಂಪನಿಗಳಿಗೆ ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News