ಬ್ರಿಟನ್: ಅಕ್ರಮ ವಾಸಿ ಭಾರತೀಯರ ಗಡಿಪಾರಿಗೆ 70 ದಿನಗಳ ಗಡುವು

Update: 2018-01-19 17:17 GMT

ಲಂಡನ್, ಜ. 19: ಅಕ್ರಮ ವಲಸಿಗರು ಎಂಬುದಾಗಿ ಬ್ರಿಟನ್ ಆರೋಪಿಸಿರುವ ವ್ಯಕ್ತಿಗಳ ಗುರುತು ತಪಾಸಣೆ ನಡೆಸುವ 70 ದಿನಗಳ ಗಡುವಿಗೆ ಭಾರತ ಸಮ್ಮತಿ ನೀಡಲಿದೆ. ಈ ಸಂಬಂಧದ ತಿಳುವಳಿಕೆ ಪತ್ರವೊಂದಕ್ಕೆ ಎಪ್ರಿಲ್‌ನಲ್ಲಿ ಬ್ರಿಟನ್‌ಗೆ ಭೇಟಿ ನೀಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಲಿದ್ದಾರೆ.

ತಿಳುವಳಿಕೆ ಪತ್ರದ ಬರಹವನ್ನು ಅಂತಿಮಗೊಳಿಸಲಾಗಿದೆ ಹಾಗೂ ಅದಕ್ಕೆ ಭಾರತದ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಮತ್ತು ಬ್ರಿಟನ್‌ನ ವಲಸೆ ಸಚಿವೆ ಕ್ಯಾರಲಿನ್ ನೋಕ್ಸ್ ಅಂಗೀಕಾರ ನೀಡಿದ್ದಾರೆ.

ಭಾರತೀಯರಿಗೆ ಬ್ರಿಟನ್ ನೀಡುವ ವೀಸಾ ಕೊಡುಗೆಯನ್ನು ಸುಧಾರಿಸುವುದು ಒಪ್ಪಂದದ ಪ್ರಮುಖ ಅಂಶವಾಗಿದೆ. ಮೋದಿ ಭೇಟಿ ವೇಳೆ, ಕೊಡುಗೆಗಳನ್ನು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಅಕ್ರಮ ನಿವಾಸಿ ಭಾರತೀಯರನ್ನು ವಾಪಸ್ ಕಳುಹಿಸುವುದು ಒಪ್ಪಂದದ ಇನ್ನೊಂದು ಪ್ರಮುಖ ಅಂಶವಾಗಿದೆ. ಶಂಕಿತರ ಭಾರತ ರಾಷ್ಟ್ರೀಯತೆಯನ್ನು ಖಚಿತಪಡಿಸುವಲ್ಲಿ ಆಗಿರುವ ವಿಳಂಬದಿಂದಾಗಿ ಅವರ ವಾಪಸಾತಿಯಲ್ಲೂ ವಿಳಂಬವಾಗಿದೆ. 70 ದಿನಗಳ ಗಡುವು ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News